Advertisement

ಏಷ್ಯಾಕಪ್‌ ಮಹಿಳಾ ಬಾಸ್ಕೆಟ್‌ಬಾಲ್‌ ಇಂದು ಭಾರತ v/s ಕಜಕೀಸ್ತಾನ ಫೈನಲ್

10:18 AM Jul 29, 2017 | |

ಬೆಂಗಳೂರು: ಫಿಬಾ ಏಷ್ಯಾ ಕಪ್‌ ಮಹಿಳಾ ಬಾಸ್ಕೆಟ್‌ಬಾಲ್‌ ಕೂಟದ “ಬಿ’ ಗುಂಪಿನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ 79-69 ಅಂಕಗಳ ಅಂತರದಿಂದ ಲೆಬನಾನ್‌ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ. ಶನಿವಾರ ನಡೆಯಲಿರುವ “ಬಿ’ ಗುಂಪಿನ ಫೈನಲ್‌ನಲ್ಲಿ ಭಾರತ ಬಲಿಷ್ಠ ಕಜಕೀಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಭಾರತಕ್ಕೆ ಎದುರಾದ ಕಠಿಣ ಸವಾಲು: ಸೆಮಿಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಜಯ ಸುಲಭದ್ದಾಗಿರಲಿಲ್ಲ. ಲೆಬನಾನ್‌ ಪ್ರಬಲ ಹೋರಾಟ ನೀಡುವ ಮೂಲಕ ಭಾರತೀಯ ಆಟಗಾರ್ತಿಯರಿಗೆ ಶಾಕ್‌ ನೀಡಿತ್ತು. ಆದರೆ ಭಾರತೀಯ ಆಟಗಾರ್ತಿಯರು ಎಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಜೀನಾ ಸಕಾರಿಯಾ 20 ಅಂಕ ಭಾರತದ ಪರ ವೈಯಕ್ತಿಕ ಅತ್ಯಧಿಕ ಅಂಕಗಳಿಸಿದ ಆಟಗಾರ್ತಿಯಾದರು. ಉಳಿದಂತೆ ರಾಸ್‌ಪ್ರೀತ್‌ ಸಿಧು 17 ಹಾಗೂ ಅನಿತಾ ಪಾಲ್‌ ದುರಾನಿ 13 ಅಂಕಗಳಿಸಿ ತಂಡದ ಗೆಲುವಿನ ರೂವಾರಿಗಳಾದರು.

ಸೋಲಿನಲ್ಲೂ ಮಿಂಚಿದ ಲೆಬನಾನ್‌: ಲೆಬ ನಾನ್‌ ಫೈನಲ್‌ಗೆ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದರೂ ಅಭಿಮಾನಿಗಳ ಮೆಚ್ಚಿಗೆ ಪಡೆಯಿತು. ಫೈನಲ್‌ ಪ್ರವೇಶಿಸುವ ಪಟ್ಟನ್ನು ಕೊನೆ ತನಕ ಬಿಟ್ಟುಕೊಡದಿದ್ದ ಲೆಬನಾನ್‌ ಭಾರತಕ್ಕೆ ಭಾರೀ ಆಘಾತ ನೀಡಿತು. ತಂಡದ ಪರ ಲಾಮ ಮೌಕಾದೆಮ್‌ 16 ಅಂಕ, ಎಲ್‌ ಚಾರಿಫ್ ಚಿರಿನೆ 13 ಅಂಕ ಸಂಪಾದಿಸಿ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿಸಿದರು. ಆದರೆ ಉಳಿದ ಆಟಗಾರ್ತಿಯರು ವಿಫ‌ಲರಾಗಿದ್ದರಿಂದ ಲೆಬನಾನ್‌ ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕಳೆದುಕೊಳ್ಳುವಂತಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next