Advertisement
ಸೋಮವಾರ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 339 ರನ್ ಪೇರಿಸಿದರೆ, ಜಪಾನ್ 8 ವಿಕೆಟಿಗೆ 128 ರನ್ ಗಳಿಸಿ ಶರಣಾಯಿತು. ಇದರೊಂದಿಗೆ ಜಪಾನ್ ಎರಡೂ ಲೀಗ್ ಪಂದ್ಯಗಳನ್ನು ಸೋತಂತಾಯಿತು. ಭಾರತ ಮೊದಲ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ 43 ರನ್ನುಗಳ ಸೋಲನುಭವಿಸಿತ್ತು.
ಭಾರತದ ಸರದಿಯಲ್ಲಿ ನಾಯಕ ಮೊಹಮ್ಮದ್ ಅಮಾನ್ ಅಜೇಯ 122 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು (118 ಎಸೆತ, 7 ಬೌಂಡರಿ). ಆರಂಭಕಾರ ಆಯುಷ್ ಮ್ಹಾತ್ರೆ 54, ಕೆ.ಪಿ. ಕಾರ್ತಿಕೇಯ 57 ರನ್ ಹೊಡೆದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ಚೇತನ್ ಶರ್ಮ, ಹಾರ್ದಿಕ್ ರಾಜ್ ಮತ್ತು ಕೆ.ಪಿ. ಕಾರ್ತಿಕೇಯ. ಮೂವರೂ ತಲಾ 2 ವಿಕೆಟ್ ಉರುಳಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ ಯುಎಇಯನ್ನು 69 ರನ್ನುಗಳಿಂದ ಪರಾಭವಗೊಳಿಸಿತು.