Advertisement
ಎರಡೂ ತಂಡಗಳ ಬಲಾಬಲವನ್ನು ನೋಡಿದರೆ ಭಾರತವೇ ಗೆಲ್ಲುವ ಫೇವರಿಟ್ ತಂಡವಾಗಿದೆ. ಕೂಟದ “ಎ’ ಗುಂಪಿನಲ್ಲಿರುವ ಭಾರತ ಈಗಾಗಲೇ ಜಪಾನ್ ವಿರುದ್ಧ 5-1 ಗೋಲುಗಳಿಂದ ಮತ್ತು ಬಾಂಗ್ಲಾ ವಿರುದ್ಧ 7-0 ಗೋಲುಗಳಿಂದ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಜತಗೆ 2ನೇ ಸುತ್ತಿಗೆ ಪ್ರವೇಶಿಸಿದೆ. ಅದೇ ರೀತಿ ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ 7-0 ಗೋಲುಗಳಿಂದ ಜಯ ಸಾಧಿಸಿದರೆ, ಜಪಾನ್ ವಿರುದ್ಧ 2-2ರಿಂದ ಡ್ರಾ ಮಾಡಿಕೊಂಡಿದೆ. ಹೀಗಾಗಿ ಪಾಕ್ 4 ಅಂಕ ಸಂಪಾದಿಸಿ 2ನೇ ಸುತ್ತಿಗೆ ಪ್ರವೇಶಿಸಿದೆ. ಒಮ್ಮೆ ಈ ಪಂದ್ಯದಲ್ಲಿ ಪಾಕ್ ಗೆದ್ದರೆ ಅಗ್ರಸ್ಥಾನದಲ್ಲಿಯೇ 2ನೇ ಸುತ್ತಿಗೆ ಲಗ್ಗೆ ಹಾಕುವ ಅವಕಾಶವಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರೀಡಾ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಪ್ರತಿ ಪಂದ್ಯವೂ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಸಿರುತ್ತದೆ. ಈ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. Advertisement
ಏಷ್ಯಾ ಕಪ್ ಹಾಕಿ: ಇಂದು ಭಾರತಕ್ಕೆ ಪಾಕ್ ಎದುರಾಳಿ
07:00 AM Oct 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.