ಲಾಹೋರ್: ಇಲ್ಲಿನ “ಕರ್ನಲ್ ಗದ್ದಾಫಿ ಸ್ಟೇಡಿಯಂ’ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಕೂಟದ ರವಿವಾರ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಬಾಂಗ್ಲಾದೇಶ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದೆ.
335 ರನ್ ಗಳ ಭಾರಿ ಮೊತ್ತ ಬೆನ್ನತ್ತಿದ ಅಫ್ಘಾನ್ 44.3 ಓವರ್ ಗಳಲ್ಲಿ 245 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ಬಾಂಗ್ಲಾದೇಶ 89 ರನ್‌ಗಳ ಅಮೋಘ ಜಯ ಸಾಧಿಸಿತು
ಅಫ್ಘಾನ್ ಪರ ರಹಮಾನುಲ್ಲಾ ಗುರ್ಬಾಜ್ 1 ರನ್ ಗಳಿಸಿದ್ದಾಗ ತಂಡ ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಬ್ರಾಹಿಂ ಜದ್ರಾನ್ 75 ರನ್ ಗಳಿಸಿದ್ದಾಗ ಔಟಾದರು. ರಹಮತ್ ಶಾ 33, ನಾಯಕ ಹಶ್ಮತುಲ್ಲಾ ಶಾಹಿದಿ 51 ರನ್ ಗಳಿಸಿದ್ದ ವೇಳೆ ಔಟಾದರು. ನಜೀಬುಲ್ಲಾ ಜದ್ರಾನ್ 17, ಮೊಹಮ್ಮದ್ ನಬಿ 3, ಗುಲ್ಬದಿನ್ ನೈಬ್ 15, ಕರೀಂ ಜನತ್ 1,
ಕೊನೆಯಲ್ಲಿ ರಶೀದ್ ಖಾನ್ 24 ರನ್ ಗಳಿಸಿ ಔಟಾದರು. ಮುಜೀಬ್ ಉರ್ ರೆಹಮಾನ್ 4 ರನ್ ಗಳಿಸಿದ್ದ ವೇಳೆ ಭರ್ಜರಿ ಸಿಕ್ಸರ್ ಸಿಡಿಸಲು ಮುಂದಾಗಿ ಹಿಟ್ ವಿಕೆಟ್ ಗೆ ಔಟಾದರು.
ಬಾಂಗ್ಲಾ ಪರ , ತಸ್ಕಿನ್ ಅಹ್ಮದ್ 4,ಶೋರಿಫುಲ್ ಇಸ್ಲಾಂ 3, ಹಸನ್ ಮಹಮೂದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ಒಂದು ವಿಕೆಟ್ ಪಡೆದರು.
ಅಫ್ಘಾನ್ ಮುಂದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಶ್ರೀಲಂಕಾ ಈಗಾಗಲೇ ಬಾಂಗ್ಲಾ ವಿರುದ್ಧ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಐದು ವಿಕೆಟ್ ನಷ್ಟಕ್ಕೆ 334 ರನ್ ಕಲೆ ಹಾಕಿ ಭರ್ಜರಿ ಗುರಿಯನ್ನೇ ಮುಂದಿಟ್ಟಿತ್ತು. 119 ಎಸೆತಗಳಲ್ಲಿ 112 ರನ್ ಗಳಿಸಿದ ಮೆಹದಿ ಹಸನ್ ಕೈಗೆ ಗಾಯಮಾಡಿಕೊಂಡು ಮೈದಾನದಿಂದ ಹೊರನಡೆದರು. ಮತ್ತೊಂದೆಡೆ ಅದ್ಭುತ ಫಾರ್ಮ್ ಮುಂದುವರಿಸಿದ ಶಾಂಟೋ 104 ರನ್ ಗಳಿಸಿ ರನೌಟಾದರು. ಉಳಿದಂತೆ ನಾಯಕ ಶಕೀಬ್ ಅಜೇಯ 32 ರನ್, ಮುಶ್ಫಿಕರ್ ರಹೀಂ 25 ರನ್ ಮಾಡಿದರು.