ಕೊಲಂಬೊ: ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಸುತ್ತಿನ ತನ್ನ ಮೊದಲ ಪಂದ್ಯವನ್ನು ಭಾರತವು ರವಿವಾರ ಆಡಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ರವಿವಾರ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಅಡಲಿದೆ.
ವಾರದ ಹಿಂದೆ ಪಲ್ಲೆಕೆಲೆಯಲ್ಲಿ ನಡೆದಿದ್ದ ಮೊದಲ ಸುತ್ತಿನ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಹೀಗಾಗಿ ಭಾರತ ಮತ್ತು ಪಾಕ್ ನಡುವಿನ ಸೂಪರ್ ಫೋರ್ ಪಂದ್ಯಕ್ಕೆ ಮೀಸಲು ದಿನ ಒದಗಿಸಲಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪಾಕಿಸ್ತಾನದ ವಿರುದ್ಧದ ಭಾರತದ ಸೂಪರ್ -4 ಪಂದ್ಯಕ್ಕೆ ಮೀಸಲು ದಿನವನ್ನು ಸೇರಿಸಲಾಗಿದೆ. ಮಳೆಯಿಂದ ಸೆ.10ರ ಪಂದ್ಯ ರದ್ದಾದರೆ ಸೆ.11 ರಂದು ಪಂದ್ಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:Sandalwood; ‘ಮಡಿಕೇರಿ’ಯತ್ತ ಬಂಗಾರು; ಕಾಲ್ಗೆಜ್ಜೆ ನಿರ್ದೇಶಕನ ಹೊಸ ಚಿತ್ರ
ಅಂತಹ ಸಂದರ್ಭದಲ್ಲಿ, ಟಿಕೆಟ್-ಹೋಲ್ಡರ್ ಗಳು ತಮ್ಮ ಪಂದ್ಯದ ಟಿಕೆಟ್ ಗಳನ್ನು ಹಿಡಿದಿಟ್ಟುಕೊಳ್ಳಲು ಸಲಹೆ ನೀಡಲಾಗಿದೆ. ಅದು ಮರುದಿನವೂ ಮಾನ್ಯವಾಗಿ ಉಳಿಯುತ್ತದೆ. ಮೀಸಲು ದಿನಕ್ಕೆ ಬಳಸಿಕೊಳ್ಳಲಾಗುತ್ತದೆ” ಎಂದು ಎಸಿಸಿ ಪ್ರಕಟಣೆ ಹೇಳಿದೆ.
ಒಂದು ವೇಳೆ ಮಳೆಯ ಕಾರಣದಿಂದ ಸೋಮವಾರ ಈ ಪಂದ್ಯ ನಡೆದರೆ ಭಾರತ ತಂಡಕ್ಕೆ ಮುಂದಿನ ಪಂದ್ಯಕ್ಕೆ ವಿಶ್ರಾಂತಿ ಸಿಗುವುದಿಲ್ಲ. ಯಾಕೆಂದರೆ ಸೆ.12 ಮಂಗಳವಾರದಂದು ಭಾರತ ಮತ್ತು ಶ್ರೀಲಂಕಾ ಪಂದ್ಯ ನಡೆಯಲಿದೆ.