Advertisement

ಬಾಗಲಕೋಟೆಯ 16ರ ಪೋರನಿಗೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಗೌರವ

03:24 PM Dec 18, 2020 | Suhan S |

ಬಾಗಲಕೋಟೆ: ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಶಿಕ್ಷಕರಿಗೇ ತರಬೇತಿ ಕೊಟ್ಟ ಬಾಗಲಕೋಟೆಯ 16 ವರ್ಷದ ಬಾಲಕ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮಾಡಿದ್ದಾನೆ. ಮೊಹ್ಮದ ಅಜರುದ್ದೀನ್‌ ಬಡೇಖಾನವರ ಸಾಧಕ ಬಾಲಕ.

Advertisement

1ರಿಂದ 10ನೇ ತರಗತಿವರೆಗೆ ಬಾಗಲಕೋಟೆಯಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗಮಾಡಿದ ಈತ, ಸದ್ಯ ಮಂಗಳೂರಿನ ಎಕ್ಸ್ ಪರ್ಟ್‌ ಗ್ರುಪ್‌ ಆಫ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಈತನ ತಂದೆ ರಸೂಲ್‌ಸಾಹೇಬ್ ‌ಬಡೇಖಾನವರ ನವನಗರದ ಆದರ್ಶವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದು, ತಾಯಿ ನುಜರತ್‌ ಪರವೀಣ ಖತೀಬ್‌ ಕೂಡ ಸರ್ಕಾರಿ ಉರ್ದು ಶಾಲೆ ನಂ.10 ರಲ್ಲಿ ಶಿಕ್ಷಕಿಯಾಗಿದ್ದಾರೆ.

16 ವರ್ಷದ ಬಾಲಕ ಮೊಹ್ಮದ ಅಜರುದ್ದೀನ್‌ಗೆ ಚಿಕ್ಕಂದಿನಿಂದಲೂ ಮಾಹಿತಿ ತಂತ್ರಜ್ಞಾನ ವಿಷಯದ ಮೇಲೆ ವಿಶೇಷ ಆಸಕ್ತಿ. ಹೀಗಾಗಿ 2018ರಲ್ಲಿ8ನೇ ತರಗತಿ ಇದ್ದಾಗಲೇ ಕೇಂದ್ರೀಯ ವಿದ್ಯಾಲಯ ಸಂಘಟನಾದಿಂದ ಮೈಸೂರಿನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ತರಬೇತಿಯಲ್ಲಿ ವಿಶೇಷ ತರಬೇತಿ ಪಡೆದಿದ್ದ. ಆಗಲೂ ಈತನಿಗೆ ಪ್ರಶಸ್ತಿ ಹೆಗಲೇರಿತ್ತು.

4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ: ಶಿಕ್ಷಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡುವುದು ಸಾಮಾನ್ಯ. ಆದರೆ, ಈ 16ರ ಪೋರ ಮೊಹ್ಮದ ಅಜರುದ್ದೀನ್‌ ಬಡೇಖಾನವರ, ಶಿಕ್ಷಕರಿಗೇ ತರಬೇತಿ ನೀಡಿ ಇಡೀ ದೇಶದ ಗಮನ ಸೆಳೆದಿದ್ದಾನೆ. ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಂಡಾಗ ಶಿಕ್ಷಕರು ಮಾಹಿತಿತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಹಲವು ತೊಡಕುಉಂಟಾಗಿದ್ದವು. ಆ ವಿಷಯದ ಕುರಿತು ವಿಶೇಷ ಆಸಕ್ತಿ ವಹಿಸಿ ಅಧ್ಯಯನ

ಮಾಡಿದ್ದ ಮೊಹ್ಮದ ಅಜರುದ್ದೀನ್‌, ದೇಶದ ವಿವಿಧ ಭಾಗದ ಸುಮಾರು 4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಮಾಹಿತಿ ತಂತ್ರಜ್ಞಾನ ಬಳಕೆ, ಸಮಸ್ಯೆಗಳ ನಿವಾರಣೆ ಹಾಗೂ ಆನ್‌ಲೈನ್‌ ಮೂಲಕ ಪರಿಣಾಮಕಾರಿ ಪಾಠ ಬೋಧನೆ ವಿಧಾನ ಕುರಿತು ತರಬೇತಿ ನೀಡಿದ್ದ. ಹೀಗಾಗಿ ಆತ ಇದೀಗ ಕಂಪ್ಯೂಟರ್‌ ಕೋಡಿಂಗ್‌ನಲ್ಲಿ ವಿಶ್ವದಾಖಲೆ ಮಾಡಿದ್ದಾನೆ. ಈತನ ಹೆಸರೀಗ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ ಮತ್ತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲಾಗಿದೆ.

Advertisement

ಬಾಗಲಕೋಟೆಯಲ್ಲಿದ್ದೇ ಈ ಸಾಧನೆ: ಬಾಲಕ ಮೊಹ್ಮದ ಅಜರುದ್ದೀನ್‌ ಸದ್ಯ ಬಾಗಲಕೋಟೆ ನವನಗರದ ಸೆಕ್ಟರ್‌ ನಂ.2ರಲ್ಲಿ ತಂದೆ-ತಾಯಿ ಜತೆಗೆಗಿದ್ದು, ತನ್ನಪಿಯುಸಿ ತರಗತಿಗಳನ್ನು ಆನ್‌ಲೈನ್‌ನಲ್ಲೇ ಪಡೆಯುತ್ತಿದ್ದಾನೆ. ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದ ಬಳಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಸುವ ವೇಳೆಆಗುವ ಸಮಸ್ಯೆ ಕುರಿತು ಪರಿಹಾರ ಕುರಿತು ಲಖೌನ್‌ನ 1 ಮಾರ್ಕ್ಸ್ ಸೆಲ್ಯೂಶೆನ್‌ ಸಂಸ್ಥೆ ಸೆ.4ರಿಂದ 8ರವರೆಗೆ ಒಟ್ಟು ಐದು ದಿನಗಳ ರಾಷ್ಟ್ರೀಯ ವೆಬಿನಾರ್‌ ನಡೆಸಿತ್ತು.

ಈ ವೆಬಿನಾರ್‌ನಲ್ಲಿ ಹೌ ಟು ಕ್ರಿಯೆಟ್‌ ಅಡ್ಮಿಟೆಟ್‌ ವಿಡಿಯೋಸ್‌ ಆ್ಯಸ್‌ ರಿಸೋರ್ಸ್‌ ಪರ್ಸ್‌ನ್‌ ವಿಷಯದ ಕುರಿತು ದೇಶದ 4 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದ. ಈ ತರಬೇತಿ ಪರಿಣಾಮಕಾರಿಯಾಗಿದೆ. ಈ ಬಾಲಕನ ಸಾಧನೆ ಇಂಡಿಯಾಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next