Advertisement

ಸಾಕುನಾಯಿ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ರಿವಾಲ್ವರ್‌ನಿಂದ ಗುಂಡಿಕ್ಕಿ ಹತ್ಯೆಗೈದ ಎಎಸ್‌ಐ

07:35 PM Apr 04, 2023 | Team Udayavani |

ಅಮೃತ್‌ಸರ: ಅಸಿಸ್ಟಂಟ್‌ ಸಬ್‌-ಇನ್ಸ್‌ಪೆಕ್ಟರ್‌ವೊಬ್ಬ ತನ್ನ ಹೆಂಡತಿ, ಮಗ ಮತ್ತು ಸಾಕು ನಾಯಿಯನ್ನು ತನ್ನ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡಿಕ್ಕಿ ಕೊಲೆಗೈದ ದಾರುಣ ಘಟನೆ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಮಂಗಳವಾರ ನಡೆದಿದೆ.

Advertisement

ಆರೋಪಿಯನ್ನು ಅಮೃತ್‌ಸರದಲ್ಲಿ ಎಎಸ್‌ಐ ಆಗಿರುವ ಭೂಪಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದ್ದು ಅವರ ಪತ್ನಿ ಬಲ್‌ಜಿತ್‌ ಕೌರ್‌ ಮತ್ತು ಮಗ ಲವ್‌ಪ್ರೀತ್‌ ಸಿಂಗ್‌ ಕೊಲೆಯಾದವರು.

ಪತ್ನಿ, ಮಗ ಮತ್ತು ಸಾಕು ನಾಯಿಯನ್ನೂ ಕೊಂದ ಬಳಿಕ ತಾನೂ ಗುಂಡಿಕ್ಕಿಕೊಂಡಿದ್ದಾರೆ ಎಂದು ಪೋಲಿಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಎಸ್‌ಐ ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ವಿವರಗಳು ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಇದನ್ನೂ ಓದಿಜೀವಕ್ಕೆ ಮುಳುವಾದ ಉಡುಗೊರೆ: ಹೋಮ್ ಥಿಯೇಟರ್ ಸಿಡಿದು ನವ ವಿವಾಹಿತ ಸೇರಿ ಇಬ್ಬರು ಮೃತ್ಯು

Advertisement
Advertisement

Udayavani is now on Telegram. Click here to join our channel and stay updated with the latest news.

Next