Advertisement

ನಳಂದಾ ವಿಶ್ವವಿದ್ಯಾಲಯ ಪಾರಂಪರಿಕ ತಾಣಕ್ಕೆ ಭಾರೀ ಹಾನಿ

01:58 PM Jul 23, 2022 | Shreeram Nayak |

ಪಾಟ್ನಾ: ಬಿಹಾರದ ಐತಿಹಾಸಿಕ ನಳಂದಾ ವಿಶ್ವವಿದ್ಯಾಲಯದ ಪ್ರಾಚೀನ ಸ್ಮಾರಕವೊಂದರಲ್ಲಿ, ಅಲ್ಲಿನ ಸರ್ಕಾರಿ ಎಂಜಿನಿಯರ್‌ಗಳು ಅನುಮತಿಯಿಲ್ಲದೇ ಹೂಳೆತ್ತಿದ್ದಾರೆ. ಇದರಿಂದ ನೆಲದಲ್ಲಿ ಹೂತುಹೋಗಿದ್ದ ಪಾಲರ ಕಾಲದ ಗೋಡೆಗಳಿಗೆ ಭಾರೀ ಹಾನಿಯಾಗಿದೆ.

Advertisement

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ನಿಷೇಧಿತ ವಲಯದಲ್ಲಿ, ಎಎಸ್‌ಐ (ಭಾರತ ಪುರಾತತ್ವ ಇಲಾಖೆ) ಅನುಮತಿಯಿಲ್ಲದೇ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

ಹೀಗೆಂದು ಪಾಟ್ನಾ ವಲಯ ಎಎಸ್‌ಐ ಸೂಪರಿಂಟೆಂಡ್‌ ಗೌತಮಿ ಭಟ್ಟಾಚಾರ್ಯ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಕೆಲಸವನ್ನು ತೀವ್ರ ವಿರೋಧದ ನಡುವೆಯೂ ನಡೆಸಿದ ಬಿಹಾರ ಸರ್ಕಾರದ ಕಿರಿಯ ಎಂಜಿನಿಯರ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ನಳಂದಾ ವಿವಿಗೆ ಸೇರಿದ ದೇವಸ್ಥಾನವೊಂದರ ಹಿಂಭಾಗ 8ರಿಂದ 12ನೇ ಶತಮಾನಕ್ಕೆ ಸೇರಿದ್ದ ನಿಷೇಧಿತ ವಲಯದಲ್ಲಿ ಬಲವಾದ ಯಂತ್ರಗಳನ್ನು ಬಳಸಿ ಹೂಳೆತ್ತಲಾಗಿದೆ. ಇದರ ಪರಿಣಾಮ ಪಾಲರ ಕಾಲದ ಇಟ್ಟಿಗೆ ಗೋಡೆಗಳು ಪತ್ತೆಯಾಗಿವೆ. ಆದರೆ ಅವು ಯಂತ್ರಗಳ ಹೊಡೆತಕ್ಕೆ ಸಿಲುಕಿ ಹಾಳಾಗಿವೆ ಎಂದು ಗೌತಮಿ ಬೇಸರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next