Advertisement

ದೇವಧರ್‌, ಇರಾನಿ ಟ್ರೋಫಿಗೆ ತಂಡ ಪ್ರಕಟ

06:15 AM Mar 01, 2018 | |

ಹೊಸದಿಲ್ಲಿ: ಪ್ರಸಕ್ತ ಋತುವಿನ ದೇವಧರ್‌ ಟ್ರೋಫಿ ಹಾಗೂ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ತಂಡಗಳನ್ನು ಅಂತಿಮಗೊಳಿಸಲಾಗಿದೆ.

Advertisement

ಮಾ. 4ರಿಂದ 8ರ ತನಕ ನಡೆಯಲಿರುವ ದೇವಧರ್‌ ಟ್ರೋಫಿಗಾಗಿ ಪ್ರಕಟಿಸಲಾದ ಭಾರತ “ಎ’ ಮತ್ತು ಭಾರತ “ಬಿ’ ತಂಡಗಳನ್ನು ಕ್ರಮವಾಗಿ ಆರ್‌. ಅಶ್ವಿ‌ನ್‌ ಮತ್ತು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ. ಇದು ಏಕದಿನ ಪಂದ್ಯವಾಗಿದ್ದು, ಈ ತಂಡಗಳು “ವಿಜಯ್‌ ಹಜಾರೆ ಟ್ರೋಫಿ’ ವಿಜೇತ ಕರ್ನಾಟಕ ತಂಡವನ್ನು ಎದುರಿಸಲಿವೆ.

ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧ ನಡೆಯುವ ಇರಾನಿ ಟ್ರೋಫಿ ಪಂದ್ಯಕ್ಕಾಗಿ ಶೇಷಭಾರತ ತಂಡವನ್ನು ಮುನ್ನಡೆಸುವ ಅವಕಾಶ ಕರ್ನಾಟಕದ ಕರುಣ್‌ ನಾಯರ್‌ ಪಾಲಾಗಿದೆ.

ಧರ್ಮಶಾಲಾದಲ್ಲಿ ನಡೆಯಲಿರುವ ದೇವಧರ್‌ ಟ್ರೋಫಿ ಸರಣಿಯಲ್ಲಿ ಭಾರತ ಎ-ಭಾರತ ಬಿ (ಮಾ. 4), ಭಾರತ ಬಿ-ಕರ್ನಾಟಕ (ಮಾ. 5), ಭಾರತ ಎ-ಕರ್ನಾಟಕ (ಮಾ. 6) ಮುಂಖಾಮುಖೀಯಾಗಲಿದ್ದು, ಮಾ. 8ರಂದು ಫೈನಲ್‌ ನಡೆಯಲಿದೆ.

ಇರಾನಿ ಕಪ್‌ ಪಂದ್ಯ ಮಾ. 14ರಿಂದ 18ರ ತನಕ ನಾಗ್ಪುರದಲ್ಲಿ ನಡೆಯಲಿದೆ.

Advertisement

ಭಾರತ “ಎ’ ತಂಡ: ಆರ್‌. ಅಶ್ವಿ‌ನ್‌ (ನಾಯಕ), ಪೃಥ್ವಿ ಶಾ, ಉನ್ಮುಕ್‌¤ ಚಾಂದ್‌, ಆಕಾಶ್‌ದೀಪ್‌ ನಾಥ್‌, ಶುಭಮನ್‌ ಗಿಲ್‌, ರಿಕಿ ಭುಯಿ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ (ವಿ.ಕೀ.), ಕೃಣಾಲ್‌ ಪಾಂಡ್ಯ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ಬಾಸಿಲ್‌ ಥಂಪಿ, ಕುಲವಂತ್‌ ಖೆಜೊÅàಲಿಯ, ಅಮನ್‌ದೀಪ್‌ ಖಾರೆ, ರೋಹಿತ್‌ ರಾಯುಡು.

ಭಾರತ “ಬಿ’: ಶ್ರೇಯಸ್‌ ಅಯ್ಯರ್‌ (ನಾಯಕ). ಋತುರಾಜ್‌ ಗಾಯಕ್ವಾಡ್‌, ಅಭಿಮನ್ಯು ಈಶ್ವರನ್‌, ಅಂಕಿತ್‌ ಭವೆ°, ಮನೋಜ್‌ ತಿವಾರಿ, ಸಿದ್ದೇಶ್‌ ಲಾಡ್‌, ಕೆ.ಎಸ್‌. ಭರತ್‌ (ವಿ.ಕೀ.), ಜಯಂತ್‌ ಯಾದವ್‌, ದೇವೇಂದ್ರ ಸಿನ್ಹ ಜಡೇಜ, ಹನುಮ ವಿಹಾರಿ, ಸಿದ್ಧಾರ್ಥ್ ಕೌಲ್‌, ಖಲೀಲ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ಉಮೇಶ್‌ ಯಾದವ್‌, ರಜತ್‌ ಪಾಟೀದಾರ್‌.

ಶೇಷ ಭಾರತ ತಂಡ: ಕರುಣ್‌ ನಾಯರ್‌ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್‌, ಆರ್‌. ಸಮರ್ಥ್, ಮಾಯಾಂಕ್‌ ಅಗರ್ವಾಲ್‌, ಹನುಮ ವಿಹಾರಿ, ಕೆ.ಎಸ್‌. ಭರತ್‌ (ವಿ.ಕೀ.), ರವೀಂದ್ರ ಜಡೇಜ, ಶಾಬಾಜ್‌ ನದೀಂ, ಅನ್ಮೋಲ್‌ಪ್ರೀತ್‌ ಸಿಂಗ್‌, ಸಿದ್ಧಾರ್ಥ್ ಕೌಲ್‌, ಅಂಕಿತ್‌ ರಜಪೂತ್‌, ನವದೀಪ್‌ ಸೈನಿ, ಅಜಿತ್‌ ಸೇಥ್‌.

Advertisement

Udayavani is now on Telegram. Click here to join our channel and stay updated with the latest news.

Next