ಢಾಕಾ: ಬಾಂಗ್ಲಾದೇಶಿ ಬೌಲರ್ ಗಳ ಸ್ಪಿನ್ ಜಾಲಕ್ಕೆ ಸಿಲುಕಿ ಭಾರತೀಯ ಬ್ಯಾಟರ್ ಗಳು ಸಿಲುಕಿದರೂ, ಕೊನೆಗೆ ಅಶ್ವಿನ್ ಮತ್ತು ಅಯ್ಯರ್ ಸಾಹಸದಿಂದ ಭಾರತ ತಂಡವು ಢಾಕಾ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಕೆಎಲ್ ರಾಹುಲ್ ಬಳಗ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ ನಲ್ಲಿ ಮುನ್ನಡೆ ಸಾಧಿಸಿದೆ.
ಗೆಲುವಿಗೆ 145 ಗುರಿ ಪಡೆದ ಭಾರತ ತಂಡವು ಒಂದು ಹಂತದಲ್ಲಿ ಕೇವಲ 74 ರನ್ ಗೆ ಏಳು ವಿಕೆಟ್ ಕಳೆದುಕೊಂಡು ಪರದಾಡಿತ್ತು. ಈ ವೇಳೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಮುರಿಯದ ಎಂಟನೇ ವಿಕೆಟ್ 71 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಅಯ್ಯರ್ 29 ರನ್ ಮಾಡಿದರೆ, ರವಿಚಂದ್ರನ್ ಅಶ್ವಿನ್ 42 ರನ್ ಗಳಿಸಿದರು.
ಇದನ್ನೂ ಓದಿ:ಕೇಂದ್ರದಲ್ಲಿರುವುದು ಮೋದಿ ಸರ್ಕಾರವಲ್ಲ, ಅಂಬಾನಿ- ಅದಾನಿ ಸರ್ಕಾರ: ರಾಹುಲ್ ಗಾಂಧಿ ವಾಗ್ದಾಳಿ
ಭಾರತವನ್ನು ಕಾಡಿದ ಮೆಹಿದಿ ಹಸನ್ ಮಿರಾಜ್ ಐದು ವಿಕೆಟ್ ಕಿತ್ತರೆ, ಶಕೀಬ್ ಅಲ್ ಹಸನ್ ಎರಡು ವಿಕೆಟ್ ಪಡೆದರು.
ರವಿಚಂದ್ರನ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಚೇತೇಶ್ವರ ಪೂಜಾರ ಅವರು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.