Advertisement

ಅಡಿಲೇಡ್‌ ಬೀದಿಯಲ್ಲಿ ಅಶ್ವಿ‌ನ್‌-ರೋಹಿತ್‌ ಸಂದರ್ಶನ

06:00 AM Dec 07, 2018 | Team Udayavani |

ಅಡಿಲೇಡ್: ಭಾರತ ಕ್ರಿಕೆಟಿಗರು ವಿದೇಶಿ ಪ್ರವಾಸ ತೆರಳಿದಾಗಲೆಲ್ಲ ಏನಾದರೂ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಈ ಬಾರಿ ಅಡಿಲೇಡ್‌ ಬೀದಿಯಲ್ಲಿ ಆರ್‌. ಅಶ್ವಿ‌ನ್‌ ಸಂದರ್ಶನ ಮಾಡುವ ಮೂಲಕ ರೋಹಿತ್‌ ಶರ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 

Advertisement

ಹಲವಾರು ಭಾರತೀಯ ಅಭಿಮಾನಿಗಳು ರಸ್ತೆಯಲ್ಲಿ ಕ್ರಿಕೆಟಿಗರ ನಡುವಿನ ಸಂದರ್ಶನ ಕಂಡು ಬೆರಗಾಗಿದ್ದಾರೆ. ಕ್ರಿಕೆಟ್‌ ಅಭ್ಯಾಸದ ಬಳಿಕ ಹೊಟೇಲ್‌ಗೆ ನಡೆದುಕೊಂಡು ಬರುತ್ತಿದ್ದ ವೇಳೆ ರೋಹಿತ್‌, ಪ್ರಸ್ತುತ ಕ್ರಿಕೆಟ್‌ ಸರಣಿಯ ಕುರಿತಂತೆ ಅಶ್ವಿ‌ನ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನದ ಫೋಟೊವನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next