Advertisement
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ 28 ರನ್‌ಗಳ ಸೋಲಿನಲ್ಲಿಯೂ ಆರು ವಿಕೆಟ್‌ಗಳನ್ನು ಕಬಳಿಸಿದ್ದ ಅಶ್ವಿನ್ 853 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ, ಆರು ವಿಕೆಟ್‌ಗಳನ್ನು ಪಡೆದ ವೇಗಿ ಬುಮ್ರಾ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
Related Articles
Advertisement
ಪೋಪ್ ಅವರ ಇಂಗ್ಲೆಂಡ್ ತಂಡದ ಸಹ ಆಟಗಾರ ಬೆನ್ ಡಕೆಟ್ ಅವರು ಭಾರತದ ವಿರುದ್ಧ 35 ಮತ್ತು 47 ರನ್ ಗಳಿಸಿದ ನಂತರ ಐದು ಸ್ಥಾನಗಳನ್ನು ಪ್ರಗತಿ ಸಾಧಿಸಿ 22 ನೇ ಸ್ಥಾನಕ್ಕೇರಿದ್ದಾರೆ.
ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ನಂತರ ಆಸ್ಟ್ರೇಲಿಯದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಎರಡು ಸ್ಥಾನಗಳ ಪ್ರಗತಿ ಸಾಧಿಸಿ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಅಮೋಘ ಆಟದ ನಂತರ ಮೂವರು ವೆಸ್ಟ್ ಇಂಡೀಸ್ ವೇಗಿಗಳು ತಮ್ಮ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ. ಕೆಮರ್ ರೋಚ್ ಎರಡು ಸ್ಥಾನ ಮೇಲೇರಿ 17ನೇ ಸ್ಥಾನಕ್ಕೆ ತಲುಪಿದ್ದು, ಅಲ್ಜಾರಿ ಜೋಸೆಫ್ ನಾಲ್ಕು ಸ್ಥಾನ ಮೇಲೇರಿ 33ನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಗಬ್ಬಾದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಶಮರ್ ಜೋಸೆಫ್ 42 ಸ್ಥಾನಗಳ ಏರಿಕೆ ಕಂಡು ಶ್ರೇಯಾಂಕದಲ್ಲಿ 50ನೇ ಸ್ಥಾನಕ್ಕೆ ತಲುಪಿದ್ದಾರೆ.