Advertisement

ಅಶ್ವಿ‌ನ್‌ ಏಕದಿನಕ್ಕೆ ಮರಳುವುದು ಸುಲಭವಲ್ಲ: ಹರ್ಭಜನ್‌  ಸಿಂಗ್‌

07:00 AM Aug 22, 2017 | Team Udayavani |

ಮುಂಬಯಿ: ಟೀಮ್‌ ಇಂಡಿಯಾದ ಪ್ರಧಾನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಏಕದಿನ ಕ್ರಿಕೆಟಿಗೆ ಮರಳುವುದು ಅಷ್ಟು ಸುಲಭವಲ್ಲ ಎಂದು ಮತ್ತೂಬ್ಬ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಉನ್ನತ ಮಟ್ಟದ ಫಿಟ್‌ನೆಸ್‌ ಹೊಂದಿಲ್ಲದಿರುವುದು, ರವೀಂದ್ರ ಜಡೇಜ ಉತ್ತಮ ನಿರ್ವಹಣೆ ತೋರ್ಪಡಿಸುತ್ತಿರುವುದು ಹಾಗೂ ಯುವ ಆಟಗಾರರ “ಪೂರ್ಣ ಪ್ರಮಾಣದ ಸ್ಪಿನ್‌ ಪ್ಯಾಕೇಜ್‌’ ಅನ್ನು ಟೀಮ್‌ ಇಂಡಿಯಾ ಹೊಂದಿರುವುದು ಅಶ್ವಿ‌ನ್‌ ಪುನರಾಗಮನಕ್ಕೆ ತೊಡರುಗಾಲಾಗಿ ಪರಿಣಮಿಸಲಿದೆ ಎಂಬುದು ಹರ್ಭಜನ್‌ ಅಭಿಪ್ರಾಯ. ಚಾಂಪಿಯನ್ಸ್‌ ಟ್ರೋಫಿಯ ಉತ್ತಮ ದರ್ಜೆಯ ಪಿಚ್‌ಗಳಲ್ಲೂ ಅಶ್ವಿ‌ನ್‌ ವಿಫ‌ಲರಾದುದನ್ನು ಭಜ್ಜಿ ಉಲ್ಲೇಖೀಸಿದರು. 

“ರವೀಂದ್ರ ಜಡೇಜ ಅಶ್ವಿ‌ನ್‌ಗಿಂತ ಉತ್ತಮ ಫೀಲ್ಡರ್‌. ಅವರು ಬಿರುಸಿನ ಬ್ಯಾಟಿಂಗ್‌ ಕೂಡ ಮಾಡಬಲ್ಲರು. ಅದರಲ್ಲೂ ಮಿಗಿಲಾಗಿ ಎಡಗೈ ಸ್ಪಿನ್ನರ್‌. ಏಕದಿನ ಕ್ರಿಕೆಟಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಚೈನಾ ಮನ್‌ ಕುಲದೀಪ್‌ ಯಾದವ್‌ ಮಿಂಚತೊಡಗಿದರೆ ಆಗ ಅಶ್ವಿ‌ನ್‌ ಜತೆಗೆ ಜಡೇಜ ಮೇಲೂ ಒತ್ತಡ ಬೀಳಲಿದೆ…’ ಎಂದು ಹರ್ಭಜನ್‌ ಸಿಂಗ್‌ ಹೇಳಿದರು.

“ನಾಯಕ ವಿರಾಟ್‌ ಕೊಹ್ಲಿ ಈಗ ಆಟಗಾರರ ಫಿಟ್‌ನೆಸ್‌ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಯುವರಾಜ್‌ ಸಿಂಗ್‌ ಹೊರಗುಳಿಯಲು ಫಿಟ್‌ನೆಸ್‌ ಕೊರತೆಯೇ ಕಾರಣ. ಅಶ್ವಿ‌ನ್‌ ದೈಹಿಕ ಕ್ಷಮತೆ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂದು ಸಂದರ್ಶನವೊಂದರಲ್ಲಿ ಹರ್ಭಜನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next