Advertisement
ಅಶ್ವತ್ಥಮ್ಮನಿಗೆ 3 ದಶಕಗಳಿಂದ ಭಿಕ್ಷಾಟನೆಯೇ ಜೀವನೋಪಾಯ. ಭಿಕ್ಷೆಯಲ್ಲಿ ದೈನಿಕ ಅಗತ್ಯಗಳನ್ನು ಪೂರೈಸಿ ಉಳಿದುದನ್ನು ಕೂಡಿಡುತ್ತಾರೆ. ಈ ಉಳಿತಾಯವನ್ನು ಸಮಾಜ ಸೇವೆ, ದೇವತಾ ಕಾರ್ಯಗಳಿಗೆ ಬಳಸುವುದು ಹಲವು ವರ್ಷಗಳಿಂದ ನಡೆದುಬಂದಿದೆ. ಈ ಬಾರಿ ಫೆ. 4ರಂದು ಅವರ ಸೇವೆ ಸಾಲಿಗ್ರಾಮ ದೇಗುಲಕ್ಕೆ ಸಂದಿದೆ. ಇದುವರೆಗೆ ಲಕ್ಷಾಂತರ ರೂ. ಹಣವನ್ನು ತಾನು ಬೇರೆ ಬೇರೆ ಕ್ಷೇತ್ರಗಳಿಗೆ ದೇಣಿಗೆ ನೀಡಿದ್ದೇನೆ ಎನ್ನುತ್ತಾರೆ ಅಶ್ವತ್ಥಮ್ಮ.
ಅಶ್ವತ್ಥಮ್ಮನ ತಂದೆ ಆಂಧ್ರದವರು, ತಾಯಿ ಮೈಸೂರಿನವರು. ನಾಟಕ ಕಂಪೆನಿ ಮುಖ್ಯಸ್ಥರನ್ನು ಮದುವೆಯಾಗಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದರು. 30 ವರ್ಷಗಳ ಹಿಂದೆ ಪತಿ ತೀರಿದ ಬಳಿಕ ಕುಂದಾಪುರದಲ್ಲಿ ನೆಲೆಸಿದರು. ವಯಸ್ಸಾದ ಕಾರಣ ಭಿಕ್ಷಾಟನೆಗಿಳಿದರು. ಇವರ ಮನೆ ಗಂಗೊಳ್ಳಿ ಸಮೀಪದ ಕಂಚುಗೋಡಿನಲ್ಲಿದೆ. 10 ವರ್ಷಗಳಿಂದ ಸಾಲಿಗ್ರಾಮ ದೇಗುಲ, ಅಕ್ಕಪಕ್ಕದ ಮನೆ ಜಗುಲಿಯಲ್ಲಿ ರಾತ್ರಿ ಕಳೆಯುತ್ತಾರೆ. ಹಲವು ವರ್ಷಗಳಿಂದ ಶಬರಿಮಲೆ ಯಾತ್ರೆ ಹೋಗುತ್ತಿದ್ದು, ಯಾತ್ರೆಯ ಅನ್ನದಾನಕ್ಕೂ ದೇಣಿಗೆ ನೀಡುತ್ತಿದ್ದಾರೆ. ಮೂಗಿನ ಮೇಲೆ ಬೆರಳು
ಅಜ್ಜಿ ಭಿಕ್ಷೆ ಬೇಡುವಾಗ ಮೂಗು ಮುರಿದವರು ಹಲವರು. ಈಗ 1 ಲಕ್ಷ ರೂ ನೀಡಿದ ವಿಚಾರ ವೈರಲ್ ಆಗಿದೆ, ಮೂಗು ಮುರಿದವರ ಬೆರಳು ಮೂಗಿನ ಮೇಲೇರಿದೆ.
Related Articles
– ಅಶ್ವಥಮ್ಮ, ಭಿಕ್ಷುಕಿ
Advertisement