Advertisement

DK Shivakumar Vs Ashwath Narayan ನಡುವಿನ ಜಟಾಪಟಿ ಮುಂದುವರಿದಿದೆ

11:57 PM Aug 14, 2023 | Team Udayavani |
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ  ನಡುವಿನ ಜಟಾಪಟಿ ಮುಂದುವರಿದಿದೆ. “ನವರಂಗಿ ನಾರಾಯಣ, ಅಶೋಕ್‌ ಚಕ್ರವರ್ತಿ’ ಎಂದು ಡಿಕೆಶಿ ಲೇವಡಿ ಮಾಡಿದರೆ, “ತಮ್ಮ ಆದಾಯದ ಗುಟ್ಟನ್ನು  ಬಿಟ್ಟುಕೊಡುವಂತೆ’  ಅಶ್ವತ್ಥನಾರಾಯಣ ಅವರು ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ಬಳಸಿಕೊಂಡವರು ಮೊದಲು ಉತ್ತರ ಕೊಡಲಿ: ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ
ಗುತ್ತಿಗೆದಾರರು ನೋವಿನಲ್ಲಿದ್ದಾರೆ, ಅವರ ವಿಷಯಕ್ಕೆ ನಾನು ಹೋಗುವುದಿಲ್ಲ. ಆದರೆ, ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಗೋಪಾಲಯ್ಯ, ಸಿ.ಟಿ. ರವಿ ಇವರೆಲ್ಲ ಮೊದಲು ಉತ್ತರ ಕೊಡಲಿ. ಆಮೇಲೆ ಉಳಿದ ವಿಷಯ ಮಾತ ನಾಡುತ್ತೇನೆ.

“ನಮಗೆ ನವರಂಗಿಯದು, ಚಕ್ರ ವರ್ತಿಯದು ಎಲ್ಲರದ್ದೂ ಗೊತ್ತಿದೆ. ಎಲ್ಲ ವನ್ನೂ ಒಮ್ಮೆಲೇ ಬಿಟ್ಟರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಇದಕ್ಕೆಲ್ಲ ಬಳಿಕ ಉತ್ತರಿಸುತ್ತೇನೆ. ಶಾರ್ಕ್‌ ಮೀನಿನಂತಹ ಒಂದಷ್ಟು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲವಾದರೂ ಬಿಲ್‌ ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ. ಸತ್ಯಶೋಧನೆಯ ವರದಿ ಬರಲಿ. ಆಗ ಪ್ರಾಮಾಣಿಕ ಗುತ್ತಿಗೆದಾರರಿಗೆ ಹಣ ನೀಡುತ್ತೇವೆ.

ಎಲ್ಲ ಅಕ್ರಮಗಳ ನಾಯಕ ಅಶ್ವತ್ಥ ನಾರಾಯಣ. ಇವರು ದೊಡ್ಡ ಇತಿಹಾಸವನ್ನೇ ಹೊಂದಿದ್ದಾರೆ. ಸರಕಾರದ ಜನಪ್ರಿಯತೆ ಸಹಿಸದೆ ಆಧಾರರಹಿತ ಆರೋಪ ಮಾಡುತ್ತಲೇ ಇದ್ದಾರೆ. ಇದೇ ಬಿಜೆಪಿ ಸರಕಾರ ಇದ್ದಾಗ 2 ವರ್ಷ ಯಾವುದೇ ಕಾಮಗಾರಿಗಳ ಬಿಲ್‌ಗ‌ಳನ್ನು ಬಿಡುಗಡೆ ಮಾಡಲಿಲ್ಲ ಯಾಕೆ? ನಾವು ಯಾವ ಕಾಮಗಾರಿಗಳು ನಡೆದಿವೆ ಮತ್ತು ಯಾವುದು ನಡೆದಿಲ್ಲ ಎಂದು ಪರಿಶೀಲಿಸುವುದಕ್ಕೆ ಸಮಿತಿ ಮಾಡಿದ್ದೇವೆ. ಅಲ್ಲಿಂದ ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.
ಡಿ.ಕೆ.ಶಿವಕುಮಾರ್‌ ಆದಾಯದ ಗುಟ್ಟು ತಿಳಿಸಲಿ: ಡಾ| ಅಶ್ವತ್ಥನಾರಾಯಣ, ಮಾಜಿ ಸಚಿವ
ಶಿವಕುಮಾರ್‌ ಅವರೇ, ನೀವು ಹೇಗೆ ಸಾಹುಕಾರರಾದಿರಿ ಎಂದು ಅಲ್ಲಿನ ಜನರಿಗೆ ಹೇಳಿಕೊಡಿ. ನಿಮ್ಮ ಸಮೃದ್ಧಿಯ ಗುಟ್ಟು ಹೇಳಿದರೆ ಎಲ್ಲರೂ ಅಭಿವೃದ್ಧಿ ಆಗುತ್ತಾರೆ. ರಾಗಿ ಬಿತ್ತಿ ಬಂಗಾರದ ರಾಗಿ ಬೆಳೆಯುವುದು ಹೇಗೆ? ಕಬ್ಬು ಹಾಕಿದ್ರೆ ಬಂಗಾರದ ಕಬ್ಬು ಬೆಳೆಯು ವುದು ಹೇಗೆ ಎಂದು ಜನರಿಗೆ ಹೇಳಿ ಕೊಡಿ. ಸಿದ್ದರಾಮಯ್ಯ ಅವರಿಗೂ ಹೇಳಿಕೊಡಿ. ಈ ಗುಟ್ಟು ಹೇಳಿದರೆ ನಮ್ಮ ರಾಮನಗರ ಅಭಿವೃದ್ಧಿ ಕಾಣುತ್ತದೆ.
Advertisement

ಭ್ರಷ್ಟಾಚಾರವನ್ನು ಹುಟ್ಟಿಹಾಕಿ ಅದನ್ನು  ಪಾಲನೆ ಮಾಡಿ ಹೆಮ್ಮರವಾಗಿ ಬೆಳೆಸಿದ್ದೇ ಕಾಂಗ್ರೆಸ್‌. ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಿಲ್ಲ, ಅದರೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನೀವು ಸ್ವಲ್ಪ ಮನುಷ್ಯನ ಗುಣ ಇಟ್ಟುಕೊಳ್ಳಿ. ಮಾತು ಬರುತ್ತದೆ ಎಂದು ಮಾತನಾಡಿ ಭಂಡತನ ತೋರಬೇಡಿ. ಅಂಗಲಾಚಿ, ಭಿಕ್ಷೆ ಕೊಡಿ ಎಂದು ಕೇಳಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ.

ವೈಎಸ್‌ಟಿ, ಡಿಕೆ ಟ್ಯಾಕ್ಸ್‌ ಏನಾದರೂ ಹೇಳಲಿ, ನಾವು ಮಾಡು ವುದನ್ನು ಮಾಡುತ್ತೇವೆ ಎಂಬುದು ನಿಮ್ಮ ಧೋರಣೆ. ಮೊದಲು ನಿಮ್ಮ ಆದಾಯದ ಗುಟ್ಟು ಹೇಳಿಕೊಡಿ. ನವರಂಗಿ ಗಳು ನಾವಲ್ಲ ನೀವು. ಬಿ.ಆರ್‌. ಪಾಟೀಲ್‌ ಪತ್ರ ನಕಲಿ ಎಂದು  ಮಾಧ್ಯಮಗಳಿಗೆ ಬೆದರಿಕೆ ಕಿರುಕುಳ ನೀಡುತ್ತಿದ್ದೀರಿ.  ಅಸಲಿಯೋ, ನಕಲಿಯೋ ಎಂದು ನಾವು ಸರ್ಟಿಫೈ ಮಾಡು ತ್ತೇವೆ. ಅಸಹಾಯಕರನ್ನು ಬೆದರಿಸುವುದನ್ನು ನಿಲ್ಲಿಸಿ.
Advertisement

Udayavani is now on Telegram. Click here to join our channel and stay updated with the latest news.

Next