Advertisement

ಇಂಧನ ಖಾಲಿ : ಬೆಂಗಾವಲು ವಾಹನದಲ್ಲಿ ಸಂಚರಿಸಿದ ಉನ್ನತ ಶಿಕ್ಷಣ ಸಚಿವ

03:13 PM Feb 14, 2022 | Team Udayavani |

ಕಲಬುರಗಿ : ಎರಡು ದಿನಗಳ ಕಾಲ ಕಲಬುರಗಿ – ಯಾದಗಿರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿಮಾನ ನಿಲ್ದಾಣಕ್ಕೆ ಬರುವಾಗ ದಾರಿ ನಡುವೆ ವಾಹನದಲ್ಲಿ ಇಂಧನ ಖಾಲಿಯಾಗಿದ್ದರಿಂದ ಪೊಲೀಸ್‌ ಬೆಂಗಾವಲು ವಾಹನದಲ್ಲಿ ಸಂಚರಿಸಿ ವಿಮಾನ ಹತ್ತಿರುವ ಘಟನೆ ನಡೆದಿದೆ.

Advertisement

ಯಾದಗಿರಿಯಿಂದ ಶಹಾಪುರ-ಜೇವರ್ಗಿ ರಸ್ತೆ ಮಾರ್ಗವಾಗಿ ಕಲಬುರಗಿ ಆಗಮಿಸುತ್ತಿದ್ದಾಗ ಜೇವರ್ಗಿ ದಾಟಿ ಕಲಬುರಗಿಗೆ ಬರುವಾಗ ಸಚಿವರು ಸಂಚರಿಸುತ್ತಿದ್ದ ಕಾರಿನ ಇಂಧನ ಖಾಲಿಯಾಯಿತು. ಇದರ ಬೆನ್ನಲ್ಲೇ ಇವರ ಜತೆ ಮತ್ತೂಂದು ಕಾರಿನಲ್ಲಿ ಸಂಚರಿಸುತ್ತಿದ್ದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಾರು ಸಹ ಇಂಧನ ಖಾಲಿಯಾಗಿ ನಿಂತಿತು. ಹೀಗಾಗಿ ಸಚಿವರು ಅನಿವಾರ್ಯವಾಗಿ ಪೊಲೀಸ್‌ ಬೆಂಗಾವಲು ವಾಹನದಲ್ಲಿ ಹತ್ತಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದರು. ಎರಡೂ ಕಾರಿನ ಇಂಧನ ಖಾಲಿಯಾಗಿದ್ದರಿಂದ ಪೊಲೀಸ್‌ ಬೆಂಗಾವಲಿನಲ್ಲಿ ಬಂದ ಕಾರಣ ಸಚಿವರು 20 ನಿಮಿಷ ತಡವಾಗಿ ತಲುಪಿದರು.

ಈ ನಡುವೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ವಿಮಾನಯಾನ ನಿರ್ವಾಹಕರೊಂದಿಗೆ ಚರ್ಚಿಸಿ ವಿಮಾನದಲ್ಲಿ ಸಚಿವರನ್ನು ಕರೆದು ಕೊಂಡು ಹೋಗುವಂತೆ ನೋಡಿಕೊಂಡರು. ವಿಮಾನ 20 ನಿಮಿಷ ಕಾಲ ವಿಳಂಬವಾಗಿರುವುದನ್ನು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ : ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ವಿಚಾರಣೆ; ಆರ್ಟಿಕಲ್ 25 ಪ್ರಸ್ತಾವ

Advertisement

Udayavani is now on Telegram. Click here to join our channel and stay updated with the latest news.

Next