Advertisement

ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜು:2021-22ಕ್ಕೆ ಮಾತ್ರ ಲ್ಯಾಟರಲ್ ಪ್ರವೇಶಕ್ಕೆ ವಿನಾಯಿತಿ

11:17 AM Jun 25, 2022 | Team Udayavani |

ಬೆಂಗಳೂರು: ನಗರದ ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.ಗೆ ಲ್ಯಾಟರಲ್ ಪ್ರವೇಶ ಪಡೆದುಕೊಂಡಿದ್ದ ಡಿಪ್ಲೊಮಾ ಪದವೀಧರರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಯು (ಎಐಸಿಟಿಇ) 2021-22ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಮಾತ್ರ ವಿನಾಯಿತಿ ಕೊಟ್ಟಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಅವರು, “ಈ ಕಾಲೇಜಿನಲ್ಲಿ ಡಿಪ್ಲೊಮಾ ಪದವೀಧರರು ಲ್ಯಾಟರಲ್ ಪ್ರವೇಶಾತಿಗೆ ಎಐಸಿಟಿಇ ಅನುಮತಿ ನಿರಾಕರಿಸಿತ್ತು. ಇದರಿಂದ ಈಗಾಗಲೇ ಪ್ರವೇಶ ಪಡೆದವರಿಗೆ ತೊಂದರೆ ಆಗಿತ್ತು. ಇದನ್ನು ಎಐಸಿಟಿಇಗೆ ಪತ್ರ ಬರೆದು ಮತ್ತು ಮಾತುಕತೆ ನಡೆಸಿ ಬಗೆಹರಿಸಲಾಗಿದೆ” ಎಂದಿದ್ದಾರೆ.

ಈ ರಿಯಾಯಿತಿಯು 2021-22ರಲ್ಲಿ ಲ್ಯಾಟರಲ್ ಪ್ರವೇಶಾತಿ ಪಡೆದುಕೊಂಡಿರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಎಐಸಿಟಿಇ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next