Advertisement

Hassan ಅಶ್ವಥ್‌ ಮೇಲೆ ದಾಳಿ ಪ್ರಕರಣ : 6 ಮಂದಿ ಆರೋಪಿಗಳ ಸೆರೆ

08:21 PM Oct 22, 2023 | Team Udayavani |

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಆಪ್ತ, ಪ್ರಮುಖ ಗುತ್ತಿಗೆದಾರ ಚನ್ನರಾಯಪಟ್ಟಣದ ಅಶ್ವತ್ಥ್ ನಾರಾಯಣಗೌಡ ಅವರ ಹತ್ಯೆಗೆ ದಾಳಿ ನಡೆಸಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಒಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕೋಲಾರದಲ್ಲಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿರುವ ಜೆ.ಅಶೋಕ್‌(38), ಚನ್ನರಾಯಪಟ್ಟಣದಲ್ಲಿ ರಿಯಲ್‌ ಎಸ್ಟೇಟ್‌ ಮಾಡುತ್ತಿದ್ದ ಬಿ.ಎಸ್‌.ತೇಜಸ್ವಿ (37), ಅರವಿಂದ 40) ಬೆಂಗಳೂರಿನಲ್ಲಿ ಇನ್ಸೂರೆನ್ಸ್‌ ಏಜೆಂಟ್‌ ಆರ್‌. ಮಧುಸೂಧನ್‌ (38) , ಗಾರೆ ಕೆಲಸಗಾರ ಸಿ. ಮುರುಗನ್‌ ( 35), ಕುಡಿಯುವ ನೀರಿನ ಕ್ಯಾನ್‌ಗಳನ್ನು ಸಪ್ಲೈ ಕೆಲಸ ಮಾಡಿಕೊಂಡಿದ್ದ ಆರ್‌.ಸತೀಶ್‌ (38) ಬಂಧಿತರು.

ಬೆಂಗಳೂರಿನ ಲೋಹಿತ್‌ ಕುಮಾರ್‌ (32) ಅಲಿಯಾಸ್‌ ರೋಹಿತ್‌ ಮತ್ತು ಪ್ರವೀಣ ಉರುಫ್ ನೇಪಾಳಿ ತಲೆ ಮರೆಸಿಕೊಂಡಿದ್ದಾರೆ ಎಂದು ಎಸ್ಪಿ ಮೊಹಮ್ಮದ್‌ ಸುಜೀತಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀಮಂತರನ್ನು ಗುರುತಿಸಿ ಅವರ ಮೇಲೆ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡುವುದು ಈ ತಂಡದ ಉದ್ದೇಶ. ಆರೋಪಿಗಳ ಪೈಕಿ 2020 ರಲ್ಲಿ ಕೋಲಾರದ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಅವರನ್ನು ಅಪಹರಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಲೋಹಿತ್‌ ಭಾಗಿಯಾಗಿದ್ದ,. ಜೊತೆಗೆ ಈ ವರ್ಷವೂ ಆತನ ಮೇಲೆ ಪ್ರಕಣವೊಂದು ದಾಖಲಾಗಿದೆ. ಆರೋಪಿಗಳು ಈ ಹಿಂದೆ ಹಣಕ್ಕಾಗಿ ಅಪಹರಣ, ಸುಲಿಗೆ, ದರೋಡೆ ಪ್ರಕರಣಗಳಲ್ಲೂ ಈ ಹಿಂದೆ ಭಾಗಿಯಾಗಿದ್ದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next