Advertisement

ಕೋವಿಡ್ ಗೆ ಔಷಧವಾಗುವುದೇ ಅಶ್ವಗಂಧ? ; ವೈರಸ್‌ನ ಎಂಪ್ರೊ ಕಿಣ್ವ ಸೋಲಿಸುವಲ್ಲಿ ಯಶಸ್ವಿ

03:57 AM May 20, 2020 | Hari Prasad |

ಹೊಸದಿಲ್ಲಿ: ಭಾರತದ ಸಾಂಪ್ರದಾಯಿಕ ಔಷಧ ಪರಂಪರೆಯಲ್ಲಿ ಅಶ್ವಗಂಧ ಅಗ್ರಗಣ್ಯವಾಗಿದೆ. ಅದು ಕೋವಿಡ್ ವೈರಾಣುಗಳ ನಿರ್ಮೂಲನೆಗೂ ಸಂಜೀವಿನಿಯಾಗುವ ದಿನಗಳು ದೂರವಿಲ್ಲ!

Advertisement

ಹೌದು, ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ) ಮತ್ತು ಕೆಫೀಕ್‌ ಆ್ಯಸಿಡ್‌ ಫೆನೆಥೈಲ್‌ ಈಸ್ಟರ್‌ನಲ್ಲಿನ (ಕೇಪ್‌) ಸಂಯುಕ್ತ ಘಟಕಗಳು ಕೋವಿಡ್ ವೈರಾಣುಗಳ ಸಶಕ್ತ ಪ್ರತಿರೋಧಕಗಳನ್ನು ಉತ್ಪಾದಿಸುತ್ತವೆ ಎಂಬುದು ಸಾಬೀತಾಗಿದೆ.

ದಿಲ್ಲಿ ಐಐಟಿಯ ಡೈಲ್ಯಾಬ್‌ ಮತ್ತು ಜಪಾನಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ (ಎಐಎಸ್‌ಟಿ) ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಪತ್ತೆಯಾಗಿದೆ.

ಕೋವಿಡ್ ವೈರಾಣುಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಮಾಡುವುದು ಅವುಗಳಲ್ಲಿ ಇರುವ ಎಂಪ್ರೊ ಕಿಣ್ವಗಳು. ಅಶ್ವಗಂಧದಲ್ಲಿರುವ ಘಟಕಗಳು ಎಂಪ್ರೊ ಕಿಣ್ವಗಳ ಆಕ್ರಮಣವನ್ನು ತಡೆಯಲು ಸಮರ್ಥವಾಗಿವೆ ಎಂದು ಡೈಲ್ಯಾಬ್‌ನ ಸಂಯೋಜಕ ಪ್ರೊ| ಡಿ. ಸುಂದರ್‌ ಹೇಳಿದ್ದಾರೆ.

ಆ್ಯಂಟಿ ವೈರಲ್‌
ಆಯುರ್ವೇದದಲ್ಲಿ ಅಶ್ವಗಂಧವು ಆ್ಯಂಟಿ ವೈರಲ್‌ ಔಷಧವಾಗಿ ಬಳಕೆಯಲ್ಲಿದೆ. ಇದನ್ನು ಗಮನಿಸಿದರೆ ಪ್ರಾಥಮಿಕ ಹಂತದಲ್ಲಿ ಅಶ್ವಗಂಧವು ಕೋವಿಡ್ ಗೆ ಪರಿಣಾಮಕಾರಿ ಔಷಧ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಇನ್ನೂ ಈ ಬಗ್ಗೆ ಆಳ ಅಧ್ಯಯನಗಳು ಆಗಬೇಕಿವೆ ಎನ್ನುತ್ತಾರೆ ಸುಂದರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next