Advertisement
ಪ್ರಕೃತಿ ಮಡಿಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1959ರಲ್ಲಿ ಆರಂಭವಾದ ಆಶ್ರಮ ಶಾಲೆ ಉತ್ತಮ ಕಲಿಕಾ ವಾತಾವರಣ ಹೊಂದಿದೆ. ಗ್ರಾಮೀಣ ಪ್ರದೇಶದ ಈ ಆಶ್ರಮ ಶಾಲೆ ಯಲ್ಲಿ 50 ಮಕ್ಕಳಿಗೆ ಕಲಿಯಲು ಅವಕಾಶ ವಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ತಲಾ ಶೇ. 50 ಸ್ಥಾನ ಮೀಸಲಿರಿಸಲಾಗಿದೆ. 1 ರಿಂದ 5ನೇ ತರಗತಿ ತನಕ ವ್ಯಾಸಂಗ ಇಲ್ಲಿದೆ.
ಕಟ್ಟಡ ನಿರ್ಮಾಣವಾಗಿ 60 ವರ್ಷಗಳು ಉರುಳಿದ್ದರೂ ಸದ್ಯ ರಿಪೇರಿಯಾಗಿ ಸುಸ್ಥಿತಿಯಲ್ಲಿದೆ. ಆಶ್ರಮ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗಲೆಲ್ಲ ದುರಸ್ತಿ ಮಾಡಿಕೊಂಡು ಬರಲಾಗಿದೆ.
ಕಟ್ಟಡ ಹಳೆಯದಾದರೂ ಪರವಾಗಿಲ್ಲ ಎನ್ನುವಂತಿದೆ. ಮಕ್ಕಳಿಗೆ ಎಲ್ಲ ವ್ಯವಸ್ಥೆಗಳಿದ್ದರೂ ಬಹುಮುಖ್ಯವಾಗಿ ಪಠ್ಯೇತರ ಚಟುವಟಿಕೆಗೆ ಬೇಕಿರುವ ಪ್ರಮುಖ ಮೂರು ಸೌಕರ್ಯಗಳು ಇಲ್ಲಿಲ್ಲ.
Related Articles
ಆಟವಾಡಲು ಕ್ರೀಡಾಂಗಣ ವಿಲ್ಲ. ಸಾಂಸ್ಕೃತಿಕ ಚಟುವಟಿಕೆಗೆ ರಂಗಮಂದಿರ ವಿಲ್ಲ. 6 ಮತ್ತು 7ನೇ ತರಗತಿಯ ಬೇಡಿಕೆ ಇದ್ದರೂ ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿಲ್ಲ. ಜತೆಗೆ ತರಗತಿ ಕೊಠಡಿಗಳು ನಿರ್ಮಾಣವಾಗಬೇಕಿದೆ. ಪ್ರಸ್ತುತ ಶಾಲೆ ಮತ್ತು ವಸತಿ ನಿಲಯ ದೂರದಲ್ಲಿದ್ದು, ಒಂದೇ ಕಡೆಯಲ್ಲಿ ಸುಸಜ್ಜಿತ ಶಾಲೆ ಮತ್ತು ವಸತಿಗೃಹ ನಿರ್ಮಾಣವಾಗಬೇಕಿದೆ. ಆಶ್ರಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲ ಅವಧಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳಿಗೆ ಅವಕಾಶ ಮಾಡಿಕೊಡುತ್ತ ಬರಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಶಾಲೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಕೊಡುಗೆಗಳನ್ನು ನೀಡುತ್ತಿವೆ.
Advertisement
ದಾನಿಗಳು ಮಕ್ಕಳ ಬೆಳವಣಿಗೆಗೆ ಕೈಜೋಡಿಸು ತ್ತಿದ್ದಾರೆ. ಉತ್ತಮ ಶಿಕ್ಷಕರನ್ನು ಒಳಗೊಂಡ ಈ ಶಾಲೆಗೆ ಮುಖ್ಯವಾಗಿ ಬಾಕಿ ಇರುವ ಮೂರು ಬೇಡಿಕೆಗಳು ಈಡೇರಿದಲ್ಲಿ ಉತ್ತಮ ಎನ್ನುವುದು ಮಕ್ಕಳ ಹೆತ್ತವರ ಅಭಿಪ್ರಾಯವಾಗಿದೆ.
ಇಲಾಖೆ ಗಮನಕ್ಕೆ ತರಲಾಗಿದೆಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸು ವಲ್ಲಿ ಎಲ್ಲ ಪ್ರಯತ್ನಗಳನ್ನು ಇಲ್ಲಿ ಮಾಡಲಾಗುತ್ತಿದೆ. ಇಲಾಖೆ ಕಡೆಯಿಂದ ಕಾಲ ಕಾಲಕ್ಕೆ ಅನುದಾನ ಗಳು ಬರುವ ಮೂಲಕ ಉತ್ತಮ ಸಹಕಾರ ದೊರಕಿದೆ. ಹೆತ್ತವರು, ದಾನಿಗಳು ಹಾಗೂ ಶಿಕ್ಷಕಿಯರ ಸಹಕಾರ ಅತ್ಯುತ್ತಮವಾಗಿದೆ. ಮೂರು ಬೇಡಿಕೆಗಳ ಕುರಿತು ಇಲಾಖೆ ಗಮನಕ್ಕೆ ತರಲಾಗಿದೆ.
-ಕೃಷ್ಣಪ್ಪ ಬಿ., ಮೇಲ್ವಿಚಾರಕರು ಕಲಿಕೆ ಜತೆ ಭಜನೆ
ಆಶ್ರಮ ಶಾಲೆಯಲ್ಲಿ ಒಳ್ಳೆಯ ವಾತಾವರಣ ಇದೆ. ಮಕ್ಕಳಲ್ಲಿ ದೇವರನ್ನು ಇಲ್ಲಿ ಕಾಣಬಹುದು. ಕಲಿಕೆ ಜತೆ ಭಜನೆ ಪುಸ್ತಕ ಓದುವುದರಲ್ಲಿ ಮಕ್ಕಳು ನಿರತರಾಗಿದ್ದಾರೆ. ಈ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
– ಹರೀಶ್ ಕಾಮತ್,
ಸ್ಥಳೀಯರು ಬಾಲಕೃಷ್ಣ ಭೀಮಗುಳಿ