Advertisement
ವಿಧಾನಸಭೆಯಲ್ಲಿ ಜೆಡಿಎಸ್ ನಾಯಕರಾಗಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಉಪ ನಾಯಕ ರಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯಾ ನಾಯ್ಕ ನಿಯೋಜಿತ ರಾಗಿದ್ದಾರೆ.
ಮೇಲ್ಮನೆ ನೂತನ ಸಭಾನಾಯಕ ರಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹಾಗೂ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮ್ಮದ್ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಬೋಸರಾಜು, ಮೇಲ್ಮನೆಯಲ್ಲಿರುವ ಏಕೈಕ ಸಚಿವರಾಗಿದ್ದಾರೆ. ಅವರನ್ನು ಸಭಾ ನಾಯಕರನ್ನಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
Related Articles
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ತಿಪ್ಪಣ್ಣಪ್ಪ ಕಮಕನೂರ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಸದಸ್ಯರಾಗಿ ಮೇಲ್ಮನೆ ಪ್ರವೇಶಿಸಿದರು. ಪರಿಷತ್ತು ಆರಂಭಗೊಳ್ಳುತ್ತಿದ್ದಂತೆ ಜಗದೀಶ ಶೆಟ್ಟರ್ ಆಗಮಿಸಿದರು. ಸುಮಾರು ಹತ್ತು ನಿಮಿಷ ಕುಳಿತಿದ್ದರು. ಇನ್ನು ಎಚ್. ವಿಶ್ವನಾಥ್ ಆಡಳಿತ ಪಕ್ಷದ ಸಾಲಿನಲ್ಲೇ ಕುಳಿತು ಗಮನಸೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವರು ಉಪಸ್ಥಿತರಿದ್ದರು.
Advertisement