Advertisement

ಮಹಿಳೆ ಮೇಲೆ ಸೋಮಣ್ಣ ಹಲ್ಲೆ ಅಚಾನಕ್ ಆಗಿರುವ ಘಟನೆ: ಅಶೋಕ್

04:34 PM Oct 24, 2022 | Team Udayavani |

ಬೆಂಗಳೂರು: ಸಚಿವ ವಿ.ಸೋಮಣ್ಣ ಅವರು ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಅಚಾನಕ್ ಆಗಿದ್ದು. ಅವರು ಬೇಕೆಂದು ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Advertisement

ಸೋಮಣ್ಣ ಬೆಂಬಲಕ್ಕೆ ನಿಂತ ಅವರು, ಮಹಿಳೆ ಕೂಡ ತನಗೆ ಹೊಡೆದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ತಪ್ಪಾಗಿದ್ರೆ ಕ್ಷಮಿಸಿ ಅಂತ ಸೋಮಣ್ಣ ಕೂಡ ಹೇಳಿದ್ದಾರೆ. ಈ ಬಗ್ಗೆ ಯಾವುದೇ ದೂರು ಕೂಡ ಆಗಿಲ್ಲ ಎಂದರು.

ಇದನ್ನೂ ಓದಿ:ದಾಳಿಯ ಬಳಿಕ ಕಣ್ಣಿನ ದೃಷ್ಟಿ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ

ಸೋಮಣ್ಣ ಮನೆ ಕೊಟ್ಟಿದ್ದಾರೆಂದು ಮಹಿಳೆ ಕೂಡ ಹೇಳಿದ್ದಾರೆ. ಇದನ್ನ ಇಲ್ಲಿಗೆ ಬಿಡುವುದು ಉತ್ತಮ. ನಾವು ಸಮಾಜದ ಹಾಗೂ ಮಹಿಳೆಯರ ಪರವಾಗಿದ್ದೇವೆ ಎಂದು ಅಶೋಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next