ಮುಂಬೈ: ಹಿಂದೂಜಾ ಗ್ರೂಪ್ ನ ಪ್ರಮುಖ ಕಂಪನಿಯಾದ ಅಶೋಕ್ ಲೇಲ್ಯಾಂಡ್ ನವೆಂಬರ್ ತಿಂಗಳಿನಲ್ಲಿ ದೇಶೀಯ ಹಾಗೂ ವಿದೇಶ ಮಾರುಕಟ್ಟೆಯಲ್ಲಿ 14,053 ಸಾವಿರ ಯೂನಿಟ್ಸ್ ಮಾರಾಟ ಮಾಡುವ ಮೂಲಕ ಶೇ.3ರಷ್ಟು ಇಳಿಕೆ ಕಂಡಿರುವುದಾಇ ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Hubli; ಹುಸಿ ಬಾಂಬ್ ಕರೆ ವಿಚಾರವನ್ನೇ ಹಿಡಿದು ಜಗ್ಗಾಡುವುದು ಯಾಕೆ: ಸತೀಶ್ ಜಾರಕಿಹೊಳಿ
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಶೋಕ್ ಲೇಲ್ಯಾಂಡ್ 14,561ಯೂನಿಟ್ಸ್ ಮಾರಾಟ ಮಾಡಿತ್ತು. ಅದೇ ರೀತಿ 2023 ನವೆಂಬರ್ ನಲ್ಲಿ ಲಘು ಮತ್ತು ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿಯೂ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಶೇ.10ರಷ್ಟು ಕುಸಿತ ಕಂಡಿರುವುದಾಗಿ ಹೇಳಿದೆ.
2023ರ ನವೆಂಬರ್ ನಲ್ಲಿ 8,500 ಯೂನಿಟ್ಸ್ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷ ನವೆಂಬರ್ ನಲ್ಲಿ 9,474 ಯೂನಿಟ್ಸ್ ಮಾರಾಟವಾಗಿತ್ತು ಎಂದು ತಿಳಿಸಿದೆ. ಆದರೆ 2023ರ ನವೆಂಬರ್ ನಲ್ಲಿ ದೇಶೀಯವಾಗಿ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಲಘು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.9ರಷ್ಟು ಏರಿಕೆ ಕಂಡಿದೆ.
2023ರ ನವೆಂಬರ್ ವರೆಗೆ ಒಟ್ಟು ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ. 7ರಷ್ಟು ಏರಿಕೆಯಾಗಿರುವುದಾಗಿ ಅಶೋಕ್ ಲೇಲ್ಯಾಂಡ್ ಪ್ರಕಟನೆಯಲ್ಲಿ ತಿಳಿಸಿದೆ.