Advertisement

ಅಶೋಕ್‌ ಆರೋಪ ಸತ್ಯಕ್ಕೆ ದೂರ: ಬಿ.ಎಲ್‌. ಶಂಕರ್‌

06:15 AM Jan 04, 2018 | Team Udayavani |

ಬೆಂಗಳೂರು: ಲಾಲ್‌ಬಾಗ್‌ ಪಕ್ಕ ಸಿದ್ದಾಪುರದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಮೀನನ್ನು ಮುಖ್ಯಮಂತ್ರಿ ಡಿ ನೋಟಿಫೈ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಹೇಳಿದ್ದಾರೆ.

Advertisement

ಸರ್ವೆ ನಂಬರ್‌ 27/1, 28/4, 5, 6 ಭೂಮಿಯನ್ನು ಪ್ರೀತಿ ರಂಕ ಎಂಬುವವರು 2011 ರಲ್ಲಿ ಖಾಲಿ ಜಾಗ ಮತ್ತ ಪಾರ್ಕ್‌ ಭೂಮಿಯಲ್ಲಿ ಕೆಟಿಸಿಪಿ ಕಾಯ್ದೆ ಅನ್ವಯ 39 ಗುಂಟೆ ಜಾಗವನ್ನು ವಾಸಯೋಗ್ಯ ನಿವೇಶವನ್ನಾಗಿ ಪರಿವರ್ತಿಸುವಂತೆ  ಮನವಿ ಮಾಡಿದ್ದರು. 1948ರಲ್ಲಿ ಕನಕನ ಪಾಳ್ಯ ಬಡಾವಣೆಗೆ ಸೇರಿದ್ದ ಈ ಜಾಗವನ್ನು 1954 ರಲ್ಲಿ ಅಧಿಸೂಚನೆಯಿಂದ ವಾಪಸ್‌ ಪಡೆದು ಮೈಸೂರು ಗೆಜೆಟ್‌ನಲ್ಲಿ ಡಿನೋಟಿಫಿಕೇಶನ್‌ ಆದೇಶ ಹೊರಡಿಸಲಾಯಿತು. 1995 ರಲ್ಲಿ ಅದನ್ನು ವಾಸಯೋಗ್ಯ ನಿವೇಶನ ಎಂದು ಪರಿಗಣಿಸಲಾಯಿತು. ಆದರೆ 2015 ರಲ್ಲಿ ಅದನ್ನು ಉದ್ಯಾನ ಮತ್ತು ಖಾಲಿ ಜಾಗ ಎಂದು ಗುರುತಿಸಲಾಯಿತು.

2014 ರಲ್ಲಿ ಸರ್ಕಾರ ಭೂ ಪರಿವರ್ತನೆಗೆ ಆದೇಶ ನೀಡಿ 2015 ರಲ್ಲಿ ಆದೇಶವನ್ನು ಹಿಂಪಡೆದಿದೆ. ಭೂ ಪರಿವರ್ತನೆ ಆದೇಶ ಹಿಂಪಡೆದಿರುವ ಸರ್ಕಾರದ ಆದೇಶವನ್ನು ಪ್ರೀತಿಯವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೋರ್ಟ್‌ನಲ್ಲಿ ಅರ್ಜಿದಾರರ ಪರವಾಗಿ ಆದೇಶವಾಗಿದೆ. ಹೈ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಆಕಾಶ್‌ ರಂಕಾ ಎನ್ನುವವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈಗ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಬಿಜೆಪಿ ಮುಖಂಡ ಆರ್‌. ಅಶೋಕ್‌ ಅವರು ಯಾವುದೇ ಆಧಾರ ಇಲ್ಲದೆ ಮೇಲ್ಮೋಟಕ್ಕೆ ದೊರೆತ ದಾಖಲೆಗಳನ್ನಿಟ್ಟುಕೊಂಡು  ಆರೋಪ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಅವರನ್ನು ಮೆಚ್ಚಿಸಲು ಅಶೋಕ್‌ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಬಿ.ಎಲ್‌. ಶಂಕರ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next