ಪ್ಯಾರಿಸ್: ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಇದು ಬಾರ್ಟಿ ಗೆದ್ದ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. ಶನಿವಾರದ ಫೈನಲ್‌ನಲ್ಲಿ ಅವರು ಮಾರ್ಕೆಟಾ ವೊಂಡ್ರೂಸೋವಾ ವಿರುದ್ಧ 6-1, 6-3 ಅಂತರದ ಸುಲಭ ಜಯ ಒಲಿಸಿ ಕೊಂಡರು. ಇವರಿಬ್ಬರಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್‌ಆಗಿತ್ತು.
ಜೊಕೋವಿಕ್ ಪರಾಭವ; ಫೈನಲ್‌ಗೆ ಥೀಮ್
ನೊವಾಕ್ ಜೊಕೋವಿಕ್ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಳಿಸಿದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಫ್ರೆಂಚ್ ಓಪನ್ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಥೀಮ್ ಗೆಲುವಿನ ಅಂತರ 6-2, 3-6, 7-5, 5-7, 7-5. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯ ಶನಿವಾರ ಮುಂದುವರಿದಿತ್ತು.
ರವಿವಾರದ ಫೈನಲ್‌ನಲ್ಲಿ ರಫೆಲ್ ನಡಾಲ್-ಡೊಮಿನಿಕ್ ಥೀಮ್ ಮುಖಾಮುಖೀಯಾಗಲಿದ್ದು, ಇದು ಕಳೆದ ವರ್ಷದ ಪ್ರಶಸ್ತಿ ಸಮರದ ಪುನರಾವರ್ತನೆ ಎಂಬುದು ವಿಶೇಷ.