Advertisement

ರಂಗಮಂದಿರದಲ್ಲಿ ಆಶಿಕಾ

11:37 AM Oct 03, 2018 | Team Udayavani |

ಆಶಿಕಾ ರಂಗನಾಥ್‌ ಒಂದು ಸಿನಿಮಾ ಮುಗಿಯುತ್ತಿದ್ದಂತೆ ಮತ್ತೂಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಆಶಿಕಾ ನಟಿಸಿರುವ “ತಾಯಿಗೆ ತಕ್ಕ ಮಗ’ ಚಿತ್ರ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ಆಶಿಕಾ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು “ರಂಗಮಂದಿರ’. ಹೌದು, ಆಶಿಕಾ “ರಂಗಮಂದಿರ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳ ಚಿತ್ರೀಕರಣವಾಗಿದ್ದು, ಇಂದಿನಿಂದ ಆಶಿಕಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

Advertisement

ಶಾಹುರಾಜ್‌ ಶಿಂಧೆ ಈ ಚಿತ್ರದ ನಿರ್ದೇಶಕರು. ಈ ಹಿಂದೆ ದರ್ಶನ್‌ ಅವರ “ಅರ್ಜುನ’, “ಸ್ನೇಹನಾ ಪ್ರೀತಿನಾ’ ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ಶಾಹುರಾಜ್‌ ಈಗ “ರಂಗಮಂದಿರ’ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರದಲ್ಲಿ ಆಶು ಬ್ರೆದ್ರ ಹಾಗೂ ಪ್ರವೀಣ್‌ ತೇಜ್‌ ನಾಯಕರಾಗಿ ನಟಿಸುತ್ತಿದ್ದಾರೆ. ಇದೊಂದು ಅಪ್ಪಟ ಲವ್‌ಸ್ಟೋರಿಯಾಗಿದ್ದು, ಆಶಿಕಾಗೆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ. ಈ ಚಿತ್ರವನ್ನು ಹೊನಾರಿಯೋ ಸ್ಟುಡಿಯೋ ಮೂಲಕ ಅಮಿತಾ ಡಿಸೋಜಾ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ, ಶರವಣನ್‌ ಛಾಯಾಗ್ರಹಣವಿದೆ. ಅಂದಹಾಗೆ, ಆಶಿಕಾ  “ತಾಯಿಗೆ ತಕ್ಕ ಮಗ’ ಚಿತ್ರದ ಹಾಡೊಂದರಲ್ಲಿ ಆಶಿಕಾ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದು, ಆ ಹಾಡಿಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. “ಕ್ರೇಜಿಬಾಯ್‌’ ಚಿತ್ರದ ಮೂಲಕ ನಾಯಕಿಯಾದ ಆಶಿಕಾ ಆ ನಂತರ ಕನ್ನಡದಲ್ಲಿ “ಮಾಸ್‌ ಲೀಡರ್‌’, “ಮುಗುಳುನಗೆ’, “ರಾಜು ಕನ್ನಡ ಮೀಡಿಯಂ’,  “ತಾಯಿಗೆ ತಕ್ಕ ಮಗ’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ “ರಂಗಮಂದಿರ’ ಸರದಿ. 

Advertisement

Udayavani is now on Telegram. Click here to join our channel and stay updated with the latest news.

Next