ಅಡಿಲೇಡ್: ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿರುವ ಆಸ್ಟ್ರೇಲಿಯದ ವೇಗಿ ಜೋಶ್ ಹ್ಯಾಝಲ್‌ವುಡ್ ಆ್ಯಶಸ್ ಸರಣಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಸರಣಿಯ ಈ ದ್ವಿತೀಯ ಪಂದ್ಯ ಡಿ. 16ರಂದು “ಅಡಿಲೇಡ್ ಓವಲ್’ನಲ್ಲಿ ಆರಂಭವಾಗಲಿದೆ.
ಆ್ಯಶಸ್ ಸರಣಿಯ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ವೇಳೆ ಹ್ಯಾಝಲ್‌ವುಡ್ ಅವರಲ್ಲಿ ಈ ಸಮಸ್ಯೆ ಕಂಡುಬಂದಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 14 ಓವರ್ ಎಸೆದಿದ್ದರು.
ಅವರೊಬ್ಬರೇ ಬ್ರಿಸ್ಬೇನ್‌ನಿಂದ ಸಿಡ್ನಿಗೆ ತೆರಳಲಿದ್ದಾರೆ.ಅಡಿಲೇಡ್ ಟೆಸ್ಟ್‌ನಲ್ಲಿ ಜೋಶ್ ಹ್ಯಾಝಲ್‌ವುಡ್ ಸ್ಥಾನವನ್ನು ಜೇ ರಿಚರ್ಡ್‌ಸನ್ ತುಂಬುವ ಸಾಧ್ಯತೆ ಇದೆ.
ಇದನ್ನೂ ಓದಿ:ಮೂವರು ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಕೋವಿಡ್