Advertisement

ಆ್ಯಶಸ್‌ ಸರಣಿ: ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಮಳೆ

11:02 PM Jan 05, 2022 | Team Udayavani |

ಸಿಡ್ನಿ: ಆ್ಯಶಸ್‌ ಸರಣಿಯ ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಮಳೆ ಯಿಂದ ಅಡಚಣೆಯಾಗಿದೆ. ಮೊದಲ ದಿನ ಕೇವಲ 46.5 ಓವರ್‌ಗಳ ಆಟ ನಡೆದಿದ್ದು, ಆಸ್ಟ್ರೇಲಿಯ 3 ವಿಕೆಟಿಗೆ 126 ರನ್‌ ಗಳಿಸಿದೆ.

Advertisement

ಡೇವಿಡ್‌ ವಾರ್ನರ್‌ 30, ಮಾರ್ಕಸ್‌ ಹ್ಯಾರಿಸ್‌ 38 ಮತ್ತು ಮಾರ್ನಸ್‌ ಲಬುಶೇನ್‌ 28 ರನ್‌ ಮಾಡಿ ಔಟಾಗಿದ್ದಾರೆ. ಕ್ರೀಸಿನಲ್ಲಿರುವವರು ಸ್ಟೀವನ್‌ ಸ್ಮಿತ್‌ (6) ಮತ್ತು ಉಸ್ಮಾನ್‌ ಖ್ವಾಜಾ (4). ಇಂಗ್ಲೆಂಡ್‌ 3 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರೂ ಒಟ್ಟಾರೆ ಬೌಲಿಂಗ್‌ ಕಳಪೆಯಾಗಿತ್ತು. 20 ರನ್‌ ಎಕ್ಸ್‌ಟ್ರಾ ರೂಪದಲ್ಲೇ ಬಂದಿದೆ. ಇದರಲ್ಲಿ 12 ವೈಡ್‌, 4 ನೋಬಾಲ್‌ ಸೇರಿವೆ. ಆ್ಯಂಡರ್ಸನ್‌, ಬ್ರಾಡ್‌ ಮತ್ತು ವುಡ್‌ ಯಶಸ್ವಿ ಬೌಲರ್.

ಸರಣಿಯ ಮೊದಲ ಮೂರೂ ಟೆಸ್ಟ್‌ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯ ಈಗಾಗಲೇ ಆ್ಯಶಸ್‌ ವಶಪಡಿಸಿಕೊಂಡಿದ್ದು, ಉಳಿದೆರಡು ಟೆಸ್ಟ್‌ ಇಂಗ್ಲೆಂಡ್‌ ಪಾಲಿಗೆ ಪ್ರತಿಷ್ಠೆಯ ಪಂದ್ಯಗಳಾಗಿವೆ.

ಇದನ್ನೂ ಓದಿ:ಜೊಹಾನ್ಸ್‌ಬರ್ಗ್‌ ಟೆಸ್ಟ್‌: ಸರಣಿ ಇತಿಹಾಸವೋ? ಸಮಬಲವೋ?

ಎಕ್ಸ್‌ಟ್ರಾ ಇನ್ನಿಂಗ್ಸ್‌
-1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್‌ ಪ್ರವೇಶ ಪಡೆದ ಬಳಿಕ ದಕ್ಷಿಣ ಆಫ್ರಿಕಾ ಒಮ್ಮೆಯಷ್ಟೇ 240 ಹಾಗೂ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನಟ್ಟಿ ಗೆದ್ದಿದೆ. ಅದು ಆಸ್ಟ್ರೇಲಿಯ ಎದುರಿನ 2001-02ರ ಡರ್ಬನ್‌ ಟೆಸ್ಟ್‌ ಪಂದ್ಯವಾಗಿದ್ದು, ದಕ್ಷಿಣ ಆಫ್ರಿಕಾ 335 ರನ್‌ ಬಾರಿಸಿ ಜಯ ಸಾಧಿಸಿತ್ತು.
– ಭಾರತದ ವಿರುದ್ಧ 4ನೇ ಇನ್ನಿಂಗ್ಸ್‌ನಲ್ಲಿ ಕೇವಲ 2 ಸಲ 240 ಪ್ಲಸ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆ ನಿರ್ಮಾಣವಾಗಿದೆ. 1977-78ರ ಪರ್ತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ 339 ರನ್‌; 1987-88ರ ಹೊಸದಿಲ್ಲಿ ಟೆಸ್ಟ್‌ ನಲ್ಲಿ ವೆಸ್ಟ್‌ ಇಂಡೀಸ್‌ 276 ರನ್‌ ಬಾರಿಸಿ ಗೆದ್ದಿತ್ತು.
– ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿ ಗೆದ್ದ ದಾಖಲೆ ಆಸ್ಟ್ರೇಲಿಯದ್ದಾಗಿದೆ. ಅದು 2011-12ರಲ್ಲಿ 310 ರನ್‌ ಹಾಗೂ 2005-06ರಲ್ಲಿ 292 ರನ್‌ ಬಾರಿಸಿ ಜಯ ಸಾಧಿಸಿತ್ತು.
-ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಚೇಸಿಂಗ್‌ ದಾಖಲೆ 217 ರನ್‌. ಇದು 2005-06ರ ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next