Advertisement

ಆಷಾಢ ಮಾಸದ ಔಷಧ ಗಂಜಿ ಮೇಳ: ಜಿಲ್ಲಾಧಿಕಾರಿ ಚಾಲನೆ

12:55 AM Aug 06, 2019 | sudhir |

ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್‌ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಮೃತಂ ಆಷಾಡ ಮಾಸದ ಔಷಧ ಗಂಜಿ ಮೇಳ ಆ.5 ರಂದು ಆರಂಭಗೊಂಡಿತು. ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರು ಗಂಜಿ ಸ್ವೀಕರಿಸುವ ಮೂಲಕ ಗಂಜಿ ಮೇಳವನ್ನು ಉದ್ಘಾಟಿಸಿದರು.

Advertisement

ಕುಟುಂಬಶ್ರೀ ಜಿಲ್ಲಾ ಮಿಶನ್‌ ಕೋರ್ಡಿನೇಟರ್‌ ಟಿ.ಟಿ. ಸುರೇಂದ್ರನ್‌, ಅಸಿಸ್ಟೆಂಟ್ ಜಿಲ್ಲಾ ಮಿಶನ್‌ ಕೋಆರ್ಡಿನೇಟರ್‌ ಪ್ರಕಾಶನ್‌ ಪಾಲಾಯಿ, ಜಿಲ್ಲಾ ಮಿಶನ್‌ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. ಔಷಧೀಯ ಅಂಶಗಳಿಂದ ಕೂಡಿದ 8 ವಿಧದ ಗಂಜಿಯನ್ನು ವಿತರಿಸಲಾಯಿತು. ವಿವಿಧ ರೀತಿಯ ಜೀವನ ಶೈಲಿ ಕಾಯಿಲೆಗಳಿಂದ ಯುವಜನತೆ ಬಳಲುತ್ತಿರುವ ಇಂದಿನ ದಿನಗಳಲ್ಲಿ ಮತ್ತು ಬದುಕಿನ ಶೈಲಿ ಬದಲುತ್ತಿರುವ ಇಂದಿನ ಯುಗದಲ್ಲಿ ಆಷಾಢ ಔಷಧೀಯ ಗಂಜಿ ಪ್ರಾಕೃತಿಕ ದಿವ್ಯ ಔಷಧವಾಗಿದೆ.

ಒಬ್ಬರು ಸತತವಾಗಿ 7 ದಿನಗಳ ಕಾಲ ಸೇವಿಸ ಬೇಕಾದ 7 ವಿಧದ ಗಂಜಿಗಳನ್ನು ಮೇಳದಲ್ಲಿ ವಿತರಿಸಲಾಗುತ್ತದೆ. ತರಿಯಕ್ಕಿ ಗಂಜಿ, ಔಷಧ ಗಂಜಿ, ಜೀರಿಗೆ ಗಂಜಿ, ಹಾಲುಗಂಜಿ, ಗೋ ಗಂಜಿ, ನೆಲ್ಲಿಕಾಯಿ ಗಂಜಿ ಇತ್ಯಾದಿಗಳಲ್ಲದೆ ನೆಲ್ಲಿಕಾಯಿ ಚಣ್ನಿ, ಆಷಾಡ ಔಷಧಗಳು, ವಿವಿಧ ಸೂಪ್‌ಗ್ಳು, ವಿವಿಧ ರೀತಿಯ ಕಡುಬುಗಳು, ಪುಟ್ಟುಗಳು ಇತ್ಯಾದಿಯೂ ಮೇಳದಲ್ಲಿರುವುವು. ಕುಟುಂಬಶ್ರೀಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿರುವುವು. ಆ.13 ರ ವರೆಗೆ ಮೇಳ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next