Advertisement
ಉಡುಪಿ: ಕೋವಿಡ್ ಸೋಂಕು ತಡೆಯುವಲ್ಲಿ ಜಿÇÉಾಡಳಿತದ ವಿವಿಧ ತಂಡಗಳಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿ¨ªಾರೆ. ಗ್ರಾಮೀಣ ಭಾಗಗಳಲ್ಲಿ ತಳಮಟ್ಟದ ಆರೋಗ್ಯ ಸೇನಾನಿಗಳಾಗಿ ಮುಂಚೂಣಿಯಲ್ಲಿ ಆಶಾ ಕಾರ್ಯಕರ್ತೆಯರು ವಿರಾಮವಿಲ್ಲದೆ ದುಡಿಯುತ್ತಿ¨ªಾರೆ. ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಒಮ್ಮೆ ಮನೆ ಮನೆ ಭೇಟಿಯನ್ನು ಪೂರ್ತಿಗೊಳಿಸುರುವ ಈ “ಆರೋಗ್ಯ ಯೋಧ’ರು ಈಗ ಎರಡನೇ ಸುತ್ತಿನ ಭೇಟಿಯಲ್ಲಿದ್ದಾರೆ.
Related Articles
ಉಡುಪಿ ಜಿÇÉೆಯಲ್ಲಿ ಸುಮಾರು 1,000 ಮಂದಿ ಆಶಾ ಕಾರ್ಯಕರ್ತೆಯರು ಮನೆಮನೆಗಳಿಗೆ ತೆರಳಿ ಜಾಗೃತಿ ಮೂಡಿಸುದರೊಂದಿಗೆ ಕೋವಿಡ್ ವೈರಸ್ ತಡೆ ಕಾರ್ಯದಲ್ಲಿ ತೊಡಗಿಸಿಕೊಂಡಿ¨ªಾರೆ. ತಾಲೂಕು, ಜಿÇÉಾ ಮಟ್ಟದಲ್ಲಿ ತಲಾ 5 ಮಂದಿ ಮೆಂಟರ್ ಆಶಾ ಸುಪರ್‌ವೈಸರ್‌ಗಳಿ¨ªಾರೆ. ಪ್ರತಿದಿನದ ಮಾಹಿತಿಯನ್ನು ಆಯಾ ದಿನ ಸಂಜೆ ಮೇಲಧಿಕಾರಿಗಳಿಗೆ ನೀಡುವರು. ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯಗಳಿದ್ದರೆ ಅದನ್ನು ಕೂಡ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಸಲಹೆ ಸೂಚನೆಯಂತೆ ಮುಂದುವರಿಯುವರು.
Advertisement
ಮುಂಚೂಣಿ ಪಾತ್ರಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಸೇವೆ ನೀಡುವುದರ ಜತೆಗೆ ರಕ್ತದಾನ ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿ ಕೆಲಸ ಕಾರ್ಯ ನಡೆಸುತ್ತಿದ್ದರು. ಈಗ ಅವರು ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವರು. ಇತರ ಆರೋಗ್ಯ ಸಿಬಂದಿಯಂತೆ ಅವರ ಸೇವೆಯೂ ಕೂಡ ಮಹತ್ವದ್ದಾಗಿದೆ. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬಂದಿ ಜತೆ ಆಶಾ ಕಾರ್ಯಕರ್ತೆಯರು ಕೂಡ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲರೂ ಸಹಕರಿಸಿ ಸ್ಪಂದನೆ ನೀಡುತ್ತಿದ್ದಾರೆ. ಕೋವಿಡ್ ವೈರಸ್ ಹಿಮ್ಮೆಟ್ಟಿಸಲು ಎಲ್ಲರ ಸಹಕಾರ ಕೂಡ ಅಗತ್ಯವಾಗಿದೆ. ಅದು ಸಿಗುತ್ತಿದೆ.
– ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ ಎಲ್ಲರಿಂದಲೂ ಉತ್ತಮ ಸಹಕಾರ
ಮಾಹಿತಿ ಸಂಗ್ರಹಕ್ಕೆಂದು ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಜನರು ಸಹಕಾರ ನೀಡುತ್ತಿದ್ದಾರೆ. ನಾವು ಕೇಳಿದ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡುತ್ತಿದ್ದಾರೆ. ಇಲ್ಲಿನ ಜನರಿಗೆ ನಮ್ಮ ಬಗ್ಗೆ ಉತ್ತಮ ಗೌರವ ಇದೆ.
– ಚಂದ್ರಾವತಿ, ಆಶಾ ಕಾರ್ಯಕರ್ತೆ ನಾವು ಮಾಡಬೇಕಿರುವುದು
- ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ನಮ್ಮ ಮನೆಗೆ ಬಂದಾಗ ಅವರು ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಿ. ನೀವು ಹೊರಗಿನ ಪ್ರದೇಶಗಳಿಗೆ ಹೋಗಿದ್ದರೆ, ನಿಮ್ಮ ಮನೆಗೆ ಹೊರಗಿನವರು ಬಂದಿದ್ದರೆ ಮಾಹಿತಿಯನ್ನು ನೀಡಲು ಹಿಂಜರಿಯದಿರಿ. - ನಮ್ಮ ಆರೋಗ್ಯ ಕಾಳಜಿಗಾಗಿ ನಮ್ಮಲ್ಲಿರುವ ಆರೋಗ್ಯ ಸಂಬಂಧಿತ ವಿವಿಧ ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ಬೇಕಾದ ಮಾಹಿತಿಯನ್ನೂ ನೀಡಿ. ನಾವು ಅದಕ್ಕೆ ಔಷಧ ಪಡೆಯುತ್ತಿದ್ದೇವಲ್ಲ ಎಂದು ಮಾಹಿತಿ ನೀಡದಿರಿ. - ಹಿರಿಯರು ಮತ್ತು ಸಣ್ಣ ಮಕ್ಕಳು ಇರುವಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರುವುದು ಸಾಮಾನ್ಯ. ಆದರೆ ಈ ಮಾಹಿತಿಯೂ ಈಗಿನ ಸಮಯದಲ್ಲಿ ಇವರಿಗೆ ತುಂಬಾ ಮಹತ್ವದ್ದಾಗಿದೆ. ಕೋವಿಡ್ ವೈರಸ್ ಹೆಚ್ಚು ಕಾಡುವುದು ಇವರನ್ನೇ ಆಗಿರುವುದರಿಂದ ಈ ಮಾಹಿತಿಯನ್ನು ಮುಚ್ಚಿಡಬೇಡಿ. - ಸಾಧ್ಯವಾದರೆ ನಿಮ್ಮ ಪರಿಸರದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅಥವಾ ಹೊರಗಿನಿಂದ ಬಂದ ಮಾಹಿತಿ ಇದ್ದರೂ ಅದನ್ನು ಆರೋಗ್ಯ ಕಾರ್ಯಕರ್ತೆಯರೊಂದಿಗೆ ಹಂಚಿಕೊಳ್ಳಿ. - ನಮ್ಮ ಆರೋಗ್ಯ ವಿಚಾರಿಸಲು ಬರುವ ಇವರನ್ನು ನಮ್ಮ ಮನೆಗೆ ಬರುವ ಅತಿಥಿಗಳಿಗಿಂತಲೂ ಹೆಚ್ಚು ಗೌರವದಿಂದ ಸ್ವಾಗತಿಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವೂ ಹೌದು.