Advertisement

ಆಶಾಗಳು ಎಚ್ಚರಿಕೆಯೊಂದಿಗೆ ಕರ್ತವ್ಯ ನಿರ್ವಹಿಸಿ: ಚಂದ್ರಪ್ಪ

05:03 PM Jul 07, 2020 | Suhan S |

ಸಂಡೂರು: ಕೋವಿಡ್ ಪ್ರಮಾಣ ಹೆಚ್ಚಾಗುತ್ತಿದ್ದು ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ನಿತ್ಯ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ನೀಡುವ ಸಲಹೆ ಮತ್ತು ಎಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವೈದ್ಯಾಧಿಕಾರಿ ಡಾ| ಚಂದ್ರಪ್ಪ ತಿಳಿಸಿದರು.

Advertisement

ಅವರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸಂಜೀವಿನಿ, ಕೆಎಸ್‌ಆರ್‌ ಎಲ್‌ಪಿಎಸ್‌ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಂಘಗಳ ಎಂಬಿಕೆ ಎಲ್‌ಸಿಆರ್‌ಪಿ ಹಾಗೂ ಎಂಸಿಆರ್‌ ಪಿಗಳಿಗೆ ಕೋವಿಡ್‌-19 ತರಬೇತಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿ,ನಾವು ಮಾಡುತ್ತಿರುವ ಕೆಲಸ ವೇತನಕ್ಕಿಂತ ಹೆಚ್ಚಾಗಿ ಮಾನವೀಯತೆ ಹೊಂದಿದೆ. ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಹಲವಾರು ಕೋವಿಡ್ ಪೀಡಿತರನ್ನೂ ಸಂಪರ್ಕಿಸಿರುತ್ತೇವೆ. ಆದ್ದರಿಂದ ಕಡ್ಡಾಯವಾಗಿ ನಮ್ಮ ರಕ್ಷಣಾ ಅಂಶಗಳನ್ನು ಪಾಲಿಸಬೇಕು ಇಲ್ಲವಾದಲ್ಲಿ ನಮಗೂ ಸಹ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.

ಆರೋಗ್ಯ ಇಲಾಖೆಯಿಂದ 7 ದಿನಗಳ ಕಾಲ ರಕ್ಷಣೆಗಾಗಿ, ನಿರೋಧಕ ಶಕ್ತಿಯ ಮಾತ್ರೆಗಳ ಬಗ್ಗೆ ತಾಲೂಕು ಆರೋಗ್ಯಾಕಾರಿಗಳ ಗೈಡ್‌ಲೈನ್ಸ್‌ಗಳ ಬಗ್ಗೆ ಪೂರ್ಣ ಮಾಹಿತಿ ನೀಡಿ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು. ತರಬೇತಿಯಲ್ಲಿ ಆಶಾಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next