Advertisement

ಆಶಾಗಳ ಗೌರವಧನ ಹೆಚ್ಚಿಸಿ: ನಾಗಲಕ್ಷ್ಮೀ

09:50 AM Jun 29, 2020 | Suhan S |

ಬಳ್ಳಾರಿ: ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಫ್ರಂಟ್‌ ಲೈನ್‌ ವಾರಿಯರ್ಗಳಂತೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಗೌರವಧನ ಖಾತರಿ ಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜೂ. 30ರಂದು ಸಿಎಂ ಯಡಿಯೂರಪ್ಪ, ಸಚಿವರು, ಶಾಸಕರಿಗೂ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ತಡೆಯುವಲ್ಲಿ, ಮನೆಮನೆಗೆ ಸಮೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಅವರನ್ನು ಫ್ರಂಟ್‌ಲೆçನ್‌ ವಾರಿಯರ್ಸ್ ಗಳನ್ನಾಗಿ ಕರೆಯಲಾಗುತ್ತಿದೆ. ಎಲ್ಲೆಡೆ ಚಪ್ಪಾಳೆ, ಹೂವಿನ ಮಳೆಗೈದು ಗೌರವ ನೀಡಲಾಗುತ್ತಿದೆ. ಆದರೆ ಇಂಥ ಗೌರವಗಳಿಂದ ಆಶಾ ಕಾರ್ಯಕರ್ತೆಯರ ಹೊಟ್ಟೆ ತುಂಬಲ್ಲ. ಅವರಿಗೆ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ 12 ಸಾವಿರ ರೂ.ಗೌರವಧನ ಖಾತರಿಪಡಿಸಬೇಕು. ಇಲ್ಲದಿದ್ದಲ್ಲಿ ಜುಲೈ 10ರಿಂದ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದರು.

ರಾಜ್ಯ ಸರ್ಕಾರ ಸಹಕಾರಿ ಇಲಾಖೆ ವತಿಯಿಂದ ಕೊಡಿಸುತ್ತಿರುವ 3 ಸಾವಿರ ಪ್ರೋತ್ಸಾಹಧನವೂ ಎಲ್ಲರಿಗೂ ತಲುಪಿಲ್ಲ. ನಗರಗಳಲ್ಲಿ ಮಾತ್ರ ಕೊಟ್ಟು ಎಲ್ಲ ಕಡೆಯೂ ಕೊಟ್ಟಂತೆ ಸರ್ಕಾರ ತೋರಿಸಿಕೊಳ್ಳುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ 2500 ಆಶಾ ಕಾರ್ಯಕರ್ತೆಯರು ಇದ್ದು, ಇವರಲ್ಲಿ ಅಂದಾಜು 800 ಜನರಿಗೆ ಮಾತ್ರ ಲಭಿಸಿದೆ. ರಾಜ್ಯದಲ್ಲಿ 42 ಸಾವಿರ ಇರುವ ಆಶಾಗಳ ಪೈಕಿ ಕೇವಲ ಅಂದಾಜು 10 ಸಾವಿರ ಜನರಿಗೆ ಮಾತ್ರ ಲಭಿಸಿರಬಹುದು ಎಂದವರು ದೂರಿದರು.

ಮೂರು ತಿಂಗಳಿಂದ ಆಶಾಕಾರ್ಯಕರ್ತೆಯರು ವಿಶ್ರಾಂತಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂದೆ ನಿಂತು, ಸಮೀಕ್ಷೆ ಮಾಡಿ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ನೀಡುವುದಲ್ಲದೇ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಂಥವರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ. ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರೂ ಈವರೆಗೆ ಯಾವುದೇ ವಿಶೇಷ ಪ್ಯಾಕೇಜ್‌ ಘೋಷಿಸಲಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಅಶಾ ಕಾರ್ಯಕರ್ತೆಯರಿಗೂ ಸೋಂಕು ತಗುಲುತ್ತಿದೆ. ಸೂಕ್ತ ಸುರಕ್ಷತಾ

ಸಾಮಗ್ರಿಗಳನ್ನು ಕೊಟ್ಟಿಲ್ಲ. ಪದೇ, ಪದೇ ಆರೋಗ್ಯ ತಪಾಸಣೆ ನಡೆಸಬೇಕು. ಸೋಂಕು ತಗುಲಿರುವ ಆಶಾ ಕಾರ್ಯಕರ್ತೆಯರ ಚಿಕಿತ್ಸೆ ಅವಧಿಯಲ್ಲಿ ಗೌರವಧನ ಕೊಡಬೇಕು. ಎನ್‌95 ಮಾಸ್ಕ್, ಹ್ಯಾಂಡ್‌ ಗ್ಲೌಸ್‌, ಫೇಸ್‌ ಶೀಲ್ಡ್‌, ಸ್ಯಾನಿಟೈಸರ್‌ ಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

Advertisement

ಬಳಿಕ ಜೂ. 30ರ ಹೋರಾಟದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ದೇವದಾಸ್‌, ಶಾಂತಾ, ಗೀತಾ, ರೇಷ್ಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next