Advertisement

ಬಾಕಿ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

02:14 PM Sep 03, 2022 | Team Udayavani |

ಕಲಬುರಗಿ: ಬಾಕಿ ವೇತನವೂ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯ ಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಎದುರು ಬೃಹತ್‌ ಪ್ರತಿಭಟನಾ ಧರಣಿ ನಡೆಸಿದರು.

Advertisement

ಪ್ರತಿಭಟನೆಕಾರರು ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘದ ಮುಖಂಡರು, ನಮ್ಮ ಬಾಕಿ ವೇತನ ಸೇರಿದಂತೆ ಇತರೆ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ 15 ಬಾರಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅಲ್ಲದೇ ಎರಡು ಬಾರಿ ಕುಂದು ಕೊರತೆ ಸಭೆಯನ್ನು ಮಾಡಲಾಗಿದೆ. ಆದರೂ ನಮ್ಮ ಸಮಸ್ಯೆಗಳು ಪರಿಹಾರ ವಾಗಿಲ್ಲ ಎಂದರು.

ಸುಮಾರು 2019-2020ರಿಂದಲೇ ನೂರಾರು ಆಶಾ ಕಾರ್ಯಕರ್ತೆಯರ ವೇತನವು ಬಾಕಿ ಉಳಿದಿದೆ. ಇತ್ತೀಚೆಯ ದಿನಗಳಲ್ಲಿ ಹಲವಾರು ಆಶಾಗಳ ವೇತನ ಬಂದಿಲ್ಲ. ಇವುಗಳ ಕುರಿತು ಇಲಾಖೆಗೆ ವೇತನ ಬಾಕಿ ಇರುವ ಆಶಾಗಳ ಪಟ್ಟಿಯನ್ನು ಸಲ್ಲಿಸಲಾಗಿದೆ. ಇಲಾಖೆಯಿಂದ ಬಾಕಿ ಇರುವ ವೇತನವನ್ನು ಪಾವತಿಸುವುದಾಗಿ ಒಪ್ಪಿಕೊಂಡು ಕೊಡುವುದಾಗಿ ಹೇಳುತ್ತಲೇ ದಿನಗಳನ್ನು ಮುಂದೂಡುತ್ತಿದ್ದಾರೆ. ಇನ್ನೊಂದೆಡೆ ಆಶಾಗಳು ನಿರಂತರವಾಗಿ ಕೆಲಸಗಳನ್ನು ಮಾಡುತ್ತಿದ್ದರೂ ಹಣ ಬರುತ್ತಿಲ್ಲ. ಮತ್ತೂಂದೆಡೆ ಆಶಾಗಳಿಲ್ಲದೇ ಇನ್ನಿತರ ಕೆಲಸಗಳಿಗೆ ಒತ್ತಾಯಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ, ಮುಖಂಡೆ ಶಿವಲಿಂಗಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next