Advertisement

ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ: ಬಂಟ್ವಾಳದ ಇಬ್ಬರ ಬಂಧನ

09:02 AM Apr 04, 2020 | keerthan |

ಮಂಗಳೂರು:  ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಹಾಕಿದ ಇಬ್ಬರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

Advertisement

ಇಲ್ಲಿನ ಆಮ್ಟಾಡಿ ಗ್ರಾಮದ ಆಶಾ ಕಾರ್ಯಕರ್ತೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಮಾರಪ್ಪ ಪೂಜಾರಿ ಮತ್ತು ಉಮೇಶ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು ಎಂಬಲ್ಲಿ ಘಟನೆ ನಡೆದಿದ್ದು, ಇತ್ತೀಚೆಗೆ ವಿದೇಶದಿಂದ ಬಂದಿದ್ದ ನಿತೇಶ ಹಾಗೂ ಜಯಂತ ಎಂಬವರಿಗೆ ಆಶಾ ಕಾರ್ಯಕರ್ತೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಇದಕ್ಕೆ ನಿತೇಶ್ ಸಂಬಂಧಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ್ ಆಶಾ ಕಾರ್ಯಕರ್ತೆಗೆ ಫೋನ್ ಮಾಡಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು.

ಬಂಟ್ವಾಳ ನಗರ ಪೊಲೀರು ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next