Advertisement

ಆಶಾ ಕಾರ್ಯಕರ್ತೆಯರಿಂದ ಸಿಎಂಗೆ ಮನವಿ : ತೊಗರಿಗೆ ಪ್ರೋತ್ಸಾಹಧನ ಹೆಚ್ಚಿಸಲು ಒತ್ತಾಯ

01:56 PM Jan 10, 2021 | Team Udayavani |

ಕೊಪ್ಪಳ: ಮಾಸಿಕ 12 ಸಾವಿರ ರೂ. ವೇತನ ನೀಡುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶನಿವಾರ ತಾಲೂಕಿನ ಬಸಾಪೂರ ಲಘು ವಿಮಾನ ನಿಲ್ದಾಣದಲ್ಲಿ ಮನವಿ ಸಲ್ಲಿಸಿತು.
ಆರೋಗ್ಯ ಇಲಾಖೆ ಹಾಗೂ ಜನ ಸಮೂಹದ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ, ಕೊರೊನಾ ವಾರಿಯರ್ಸ್‌ ಎಂದೇ ಹೆಸರಾದ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಕಳೆದ 10-11 ವರ್ಷಗಳಿಂದ ನಗರ ಹಾಗೂ ಗ್ರಾಮೀಣ
ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.

Advertisement

ಕೋವಿಡ್‌ ಹೆಮ್ಮಾರಿಯ ಪಿಡುಗಿನ ಕಾಲದಲ್ಲಂತೂ ಅವರ ಅವಿರತ ಶ್ರಮದ ಸೇವೆಯನ್ನು ಪ್ರಶಂಸೆ ಮಾಡಿದವರೇ ಇಲ್ಲ. ಆದರೆ ನಮಗೆ ಸಂಭಾವನೆ ಅತಿ ಕಡಿಮೆ. ಅಲ್ಲದೇ ಆಶಾ ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್‌ಲೈನ್‌ ಮಾಡಿದೆ. ಆನ್‌ಲೈನ್‌ನಲ್ಲಿನ ಲೋಪದೋಷ ಸರಿಪಡಿಸುವ ಹೆಸರಿನಲ್ಲಿ 2018 ಮತ್ತು 2020ರ ನಡುವಿನ ಹಲವಾರು ತಿಂಗಳ ಪ್ರತಿ
ಕಾರ್ಯಕರ್ತರ ಬರಬೇಕಾಗಿದ್ದ ಸಾವಿರಾರು ರೂಪಾಯಿ ಬಂದಿಲ್ಲ. ಆಶಾಗಳಿಗೆ ಕೊಡುವ ವ್ಯವಸ್ಥೆ ಆಗಿಲ್ಲ. ಈಗಲೂ ತಿಂಗಳ
ಕೆಲಸಕ್ಕೆ ತಕ್ಕಷ್ಟು ಅವರಿಗೆ ಹಣ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಸರ್ಕಾರವು ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೌರವಧನ ಸೇರಿ 12 ಸಾವಿರ ರೂ. ಒಟ್ಟಿಗೆ ನೀಡುವಂತೆ ಒತ್ತಾಯಿಸಿದರು.

ಈ ವೇಳೆ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ಹಿರೇಗೌಡರ್‌, ಸಂಘದ
ಗಿರಿಜಮ್ಮ, ಶೋಭಾ, ಶಂಕ್ರಮ್ಮ ಪಾಲ್ಗೊಂಡಿದ್ದರು.

ತೊಗರಿಗೆ ಪ್ರೋತ್ಸಾಹಧನ ಹೆಚ್ಚಿಸಲು ಒತ್ತಾಯ
ಕುಷ್ಟಗಿ: ತೊಗರಿ ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ ಪಾಲಿನ ಪ್ರತಿ ಕ್ವಿಂಟಲ್‌ಗೆ 500 ರೂ. ಪ್ರೋತ್ಸಾಹ ಧನ ಹೆಚ್ಚುವರಿಯಾಗಿ
ನೀಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ ಅವರು ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಆಟಿಕೆ ಕ್ಲಸ್ಟರ್‌ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳಕ್ಕೆ ಹೋಗುವ ಮಾರ್ಗದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸ್ವೀಕರಿಸುವಂತೆ ಕೈಮುಗಿದರು. ಇದಕ್ಕೆ
ಸ್ಪಂದಿ ಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಾರು ನಿಲ್ಲಿಸಿ ಮನವಿ ಸ್ವೀಕರಿಸಿದರು. ಆದರೆ ನಜೀರಸಾಬ್‌ ಮೂಲಿಮನಿ ಅವರಿಗೆ ಭದ್ರತಾ ಪಡೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಂತರ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ, ಪ್ರಸಕ್ತ ವರ್ಷದ ತೊಗರಿ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 6 ಸಾವಿರ ರೂ. ನಿಗದಿಗೊಳಿಸಿದೆ.

Advertisement

ಆದರೆ ರಾಜ್ಯ ಸರ್ಕಾರದಿಂದ ಯಾವೂದೇ ಪ್ರೋತ್ಸಾಹ ಧನ ಇಲ್ಲದೇ ತೊಗರಿ ಬೆಳೆಗಾರರ ಆನ್‌ಲೈನ್‌ ನೋಂದಣಿ ಕಾರ್ಯ ನಡೆದಿದೆ. ಪ್ರೋತ್ಸಾಹ ಧನ ಪ್ರತಿ ಕ್ವಿಂಟಲ್‌ಗೆ 500 ರೂ. ಹೆಚ್ಚಿಸಬೇಕು. ಕಳೆದ ಬಾರಿ ರಾಜ್ಯ ಸರ್ಕಾರ ತನ್ನ ಪಾಲಿನ 300 ರೂ. ನೀಡಿತ್ತು ಇದೀಗ 500  ರೂ.ಗೆ ಹೆಚ್ಚಿಸಿ, ಗುಣಮಟ್ಟದ ತೊಗರಿ ಉತ್ಪನ್ನಕ್ಕೆ ಗುಣಮಟ್ಟದ ಬೆಲೆ ನೀಡಬೇಕು ಮನವಿ
ಮಾಡಿರುವುದಾಗಿ ತಿಳಿಸಿದರು. ವೀರೇಶ ಕರಡಿ, ಸುಬಾನಿ ಆರ್‌.ಟಿ., ಬಸವರಾಜ್‌ ಗಾಣಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next