Advertisement

400 ಕೋಟಿ ಗಳಿಸಿದ ʼಕಾಶ್ಮೀರ್‌ ಫೈಲ್ಸ್‌ʼ ಅಲ್ಲಿನ ಹಿಂದೂಗಳಿಗೆ ಎಷ್ಟು ಹಣ ಕೊಟ್ಟಿದೆ?: ನಟಿ

01:36 PM Oct 11, 2023 | Team Udayavani |

ಮುಂಬಯಿ:  ವಿವೇಕ್‌ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ರಿಲೀಸ್‌ ಆದ ವೇಳೆ ಅನೇಕರಿಂದ ವಿರೋಧ ಹಾಗೂ ಮೆಚ್ಚುಗೆ ಎರಡನ್ನೂ ಪಡೆದುಕೊಂಡಿತ್ತು. ಈ ಎಲ್ಲವನ್ನು ಮೀರಿ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.

Advertisement

ಕಾಶ್ಮೀರದಲ್ಲಿ ವಾಸಿಸುವ ಹಿಂದೂ ಪಂಡಿತರ ಕುರಿತಾದ ಕಥೆಯನ್ನು ಹೇಳಿದ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾದ ಬಳಿಕ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ವಿಚಾರಧಾರೆಯ ಸುತ್ತ ಅನೇಕರು ಟೀಕೆಯನ್ನು ವ್ಯಕ್ತಪಡಿಸಿದ್ದರು. ಎಡ – ಬಲಪಂಥೀಯ ಗುಂಪಿನ ನಡುವೆ ಚರ್ಚೆಯಾದ ಸಿನಿಮಾ ಒಂದೊಳ್ಳೆ ಗಳಿಕೆ ಕಂಡಿತ್ತು.

ಇತ್ತೀಚೆಗೆ ʼದಿ ಕಾಶ್ಮೀರ್‌ ಫೈಲ್ಸ್‌ʼ ,ʼಕೇರಳ ಸ್ಟೋರಿʼ ಸಿನಿಮಾದ ಬಗ್ಗೆ ಹಿರಿಯ ನಟ ನಾಸಿರುದ್ದೀನ್ ಶಾ ಅವರು ಟೀಕಿಸಿದ್ದರು. ಇದೀಗ ಹಿರಿಯ ನಟಿ ಆಶಾ ಪರೇಖ್ ಅವರು ʼದಿ ಕಾಶ್ಮೀರ್‌ ಫೈಲ್ಸ್‌ʼ ಬಗ್ಗೆ ಮಾತನಾಡಿದ್ದಾರೆ.

ನಟಿ ಆಶಾ ಪರೇಖ್ ʼನ್ಯೂಸ್ 18ʼ ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʼಕಾಶ್ಮೀರ್ ಫೈಲ್ಸ್‌ʼ ಮತ್ತುʼ ಕೇರಳ ಸ್ಟೋರಿʼಯಂತಹ ಸುತ್ತ ಕೇಳಿ ಬಂದ ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ.

“ನಾನು  ಆ ಸಿನಿಮಾಗಳನ್ನು ನೋಡಿಲ್ಲ. ಆ ಕಾರಣದಿಂದ ಅದರ ಸುತ್ತಲಿರುವ ವಿವಾದದ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ” ಎಂದಿದ್ದಾರೆ.

Advertisement

ಇಂತಹ ಸಿನಿಮಾಗಳನ್ನು ಮಾಡಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು,”ಜನರು ಅವುಗಳನ್ನು ನೋಡುತ್ತಿದ್ದರೆ, ಅವುಗಳನ್ನು ಮಾಡಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  Pathankot Mastermind: ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ ಹತ್ಯೆ

ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಉಲ್ಲೇಖಿಸಿ ಮಾತನಾಡಿದ ಅವರು, “ಹೌದು, ಜನರು ಕಾಶ್ಮೀರ ಫೈಲ್‌ಗಳನ್ನು ವೀಕ್ಷಿಸಿದ್ದಾರೆ. ನಾನು ಇಲ್ಲಿ ವಿವಾದಾತ್ಮಕ ವಿಷಯವನ್ನು ಹೇಳುತ್ತೇನೆ. ಸಿನಿಮಾದ ನಿರ್ಮಾಪಕರು 400 ಕೋಟಿ ಮಾಡಿದ್ದಾರೆ. ಆದರೆ ಇದರಿಂದ ಜಮ್ಮು& ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಹಿಂದೂ ಕಲ್ಯಾಣಕ್ಕಾಗಿ ಎಷ್ಟು ಹಣವನ್ನು ಕೊಟ್ಟಿದ್ದಾರೆ. ಅಲ್ಲಿರುವ ಹಿಂದೂಗಳಲ್ಲಿ ಇಂದಿಗೂ ನೀರು, ವಿದ್ಯುತ್ ಇಲ್ಲದವರು ಇದ್ದಾರೆ. ನಿರ್ಮಾಪಕರು ಅವರಿಗೆ ಎಷ್ಟು ಹಣ ನೀಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

“ಪ್ರತಿಯೊಬ್ಬರ ಪಾಲನ್ನು ತೆಗೆದ ಬಳಿಕ ನಿರ್ಮಾಪಕರು ತಮ್ಮ ಪಾಲನ್ನು ಹೊಂದಿರುತ್ತಾರೆ. ಚಿತ್ರದ 400 ಕೋಟಿ ಗಳಿಕೆಯಲ್ಲಿ ಅವರು 200 ಕೋಟಿ ಗಳಿಸಿದ್ದಾರೆ ಎಂದು ಭಾವಿಸೋಣ, ಅವರು ಜನರಿಗೆ ಸಹಾಯ ಮಾಡಲು 50 ಕೋಟಿ ರೂಪಾಯಿಯನ್ನಾದರೂ ನೀಡಬಹುದಿತ್ತು” ಎಂದು ನಟಿ ಹೇಳಿದ್ದಾರೆ.

2022 ರಲ್ಲಿ ತೆರೆಕಂಡ ʼಕಾಶ್ಮೀರ್‌ ಫೈಲ್ಸ್‌ʼ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಮತ್ತು ಅನುಪಮ್ ಖೇರ್, ಪಲ್ಲವಿ ಜೋಶಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next