Advertisement

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

02:30 PM Mar 30, 2022 | Team Udayavani |

ಚಿತ್ರದುರ್ಗ: ಆಶಾ ಯೋಜನೆಯ ಹೊರತಾಗಿ ಇತರೆ ಕೆಲಸಗಳಿಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಬಾರದು, ಪ್ರತಿ ವರ್ಷ ಸರಿಯಾದ ಸಮಯಕ್ಕೆ ಗುಣಮಟ್ಟದ ಸಮವಸ್ತ್ರ ಸರಬರಾಜು ಮಾಡಬೇಕು ಎನ್ನುವುದು ಸೇರಿ 9 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

Advertisement

ಸರ್ಕಾರ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳ ಕುರಿತು ಇಲಾಖೆಯ ಬಜೆಟ್‌ ಪೂರ್ವದಲ್ಲಿ ಸಂಘಕ್ಕೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಬೇಕು. ಪೋರ್ಟಲ್‌ ಸಮಸ್ಯೆಗಳಿಂದಾಗಿ ಮಾಡಿದಷ್ಟು ಕೆಲಸಕ್ಕೆ ಬರಬೇಕಾದ ಪ್ರೋತ್ಸಾಹಧನ ಬರುತ್ತಿಲ್ಲ. ಚಟುವಟಿಕೆ ಆಧರಿಸಿ ಪ್ರೋತ್ಸಾಹಧನ ಪಡೆಯಲು ಪೋರ್ಟಲ್‌ ಚಟುವಟಿಕೆಗಳ ಕಡ್ಡಾಯ ನೋಂದಣಿ ತೆಗೆದು ಹಾಕಬೇಕು. ಮಾಡಿದ ಎಲ್ಲಾ ಚಟುವಟಿಕೆಗಳಿಗೆ ಪೂರ್ಣ ಪ್ರೋತ್ಸಾಹಧನ ಪಾವತಿ ಮಾಡಬೇಕು. ಪೋರ್ಟಲ್‌ ತೊಂದರೆಯಿಂದ ಆಶಾ ಕಾರ್ಯಕರ್ತೆಯರಿಗೆ ಇಲ್ಲಿಯವರೆಗೆ ಆರ್ಥಿಕ ನಷ್ಟವನ್ನು ಹಿಂಬಾಕಿ ರೂಪದಲ್ಲಿ ಪರಿಹಾರ ತುಂಬಿ ಕೊಡಬೇಕು. ಹೆಚ್ಚುವರಿ ಕೆಲಸ ಮತ್ತು ನಗರದ ಖರ್ಚು ವೆಚ್ಚಗಳನ್ನು ಪರಿಗಣಿಸಿ ಮಾಸಿಕ ಕನಿಷ್ಠ 15 ಸಾವಿರ ರೂ. ಗೌರವಧನ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ, ಎಐಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್‌, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next