Advertisement

ಜು. 18ರಿಂದ ಅನಿರ್ದಿಷ್ಟಾವಧಿ ಹೋರಾಟ: ನಾಗಲಕ್ಷ್ಮೀ

11:19 PM Jul 06, 2019 | mahesh |

ಮಹಾನಗರ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಪ್ರೋತ್ಸಾಹ ಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಠ ಮಾಸಿಕ ಗೌರವ ಧನ 12,000 ರೂ. ನೀಡ ಬೇಕು ಹಾಗೂ ಇತರ ಬೇಡಿಕೆಗಳನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಟಿಯುಸಿ) ವತಿಯಿಂದ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Advertisement

ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾತನಾಡಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು. 18ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟವಾಧಿ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದರು.

ಸರಕಾರ ಆಶಾ ಕಾರ್ಯಕರ್ತೆಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊ ಳ್ಳುತ್ತಿದೆ. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ಆಶಾಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ತರಬೇತಿ ನೀಡಿ ಸೇವೆಗೆ ತೆಗೆದುಕೊಳ್ಳುವಾಗ ಕೆಲಸದ ಅವಧಿ ಕೇವಲ ಮನೆ ಸುತ್ತ ಮುತ್ತ 2 ಗಂಟೆ ಹೇಳುತ್ತಾರೆ. ನಿಗದಿ ಪಡಿಸಿದ ಕೆಲಸಗಳ ಜತೆಗೆ ವರ್ಷವಿಡೀ ವಿವಿಧ ಸರ್ವೆ ಕೆಲಸಗಳನ್ನು ಹೇರಲಾಗಿದೆ. ಸರ್ವೆ ವರದಿಗಳನ್ನು ನಿಗದಿತ ಸಮಯದಲ್ಲಿ ನೀಡಲು ಒತ್ತಡ, ಇತರ ಕೆಲಸಗಳನ್ನು ವಹಿಸಲಾಗುತ್ತಿದೆ. ಇದರಿಂದ ಹಗಲು- ರಾತ್ರಿ ದುಡಿಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಸಲಹೆಗಾರ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಅವರು ಪ್ರತಿಭಟನ ನಿರತರನ್ನು ಉದ್ದೇಶಿಸಿ ಮಾತನಾಡಿದರು. ಸಂಘದ ಜಿಲ್ಲಾ ಮುಖಂಡರಾದ ಸುಜಾತಾ ಶೆಟ್ಟಿ, ಜಯ ಲಕ್ಷ್ಮೀ, ಸರಸ್ವತಿ, ಮಂಜುಳಾ, ಭಾರತಿ, ಮೀನಾಕ್ಷಿ, ಹೇಮಲತಾ, ಬಬಿತಾ, ಗಾಯತ್ರಿ ಶೆಟ್ಟಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

•12,000 ರೂ. ಕನಿಷ್ಠ ಮಾಸಿಕ ಗೌರವ ಧನ ನಿಗದಿ.

Advertisement

•ಆಶಾ ಸಾಫ್ಟ್‌ ಅಥವಾ ಆರ್‌ಸಿಎಚ್ ಪೋರ್ಟಲ್ಗೆ ಆಶಾ ಪ್ರೋತ್ಸಾಹ ಧನ ಜೋಡಣೆ ರದ್ದು ಪಡಿಸ ಬೇಕು.

•10 ತಿಂಗಳಿಂದ ಬಾಕಿ ಇರುವ ಎಂಸಿಟಿಎಸ್‌ ಸೇವೆಗಳ ಪ್ರೋತ್ಸಾಹ ಧನವನ್ನು ಪ್ರತಿ ಕಾರ್ಯಕರ್ತೆಯರಿಗೆ 1000 ಜನ ಸಂಖ್ಯೆಗೆ ಮಾಸಿಕ 3,000 ರೂ. ನಂತೆ ನೀಡುವುದು ಮತ್ತು ಅದನ್ನು ಹೆಚ್ಚಿಸುವುದು ಅಥವಾ 9 ತಿಂಗಳಲ್ಲಿ ಮಾಡಿದ ಕೆಲಸದ ವರದಿ ಸಂಗ್ರಹಿಸಿ ಪ್ರೋತ್ಸಾಹ ಧನ ಪಾವತಿಸಬೇಕು.

• ಬಾಕಿ ಪ್ರೋತ್ಸಾಹ ಧನವನನ್ನು ಏಕ ಗಂಟಿನಲ್ಲಿ ನೀಡುವುದು.

•ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ.

•ನಿವೃತ್ತರಾಗುವ ಆಶಾಗಳಿಗೆ ಪಿಂಚಣಿ, ನಿವೃತ್ತಿ ಪರಿಹಾರ ನೀಡುವುದು.

• ಹೆರಿಗೆ ರಜೆ ಸೌಲಭ್ಯ ಮತ್ತು ರಜೆಯಲ್ಲಿ ಗೌರವ ಧನ ಪಾವತಿ.

•ಸರ್ವೆ, ಜಿಲ್ಲಾ- ತಾಲೂಕು ಕೇಂದ್ರದ ಸಭೆಗೆ ಕನಿಷ್ಠ 300 ರೂ. ದಿನ ಭತ್ತೆ.

ಪ್ರಮುಖ ಬೇಡಿಕೆಗಳು
12,000 ರೂ. ಕನಿಷ್ಠ ಮಾಸಿಕ ಗೌರವ ಧನ ನಿಗದಿ.
ಆಶಾ ಸಾಫ್ಟ್‌ ಅಥವಾ ಆರ್‌ಸಿಎಚ್ ಪೋರ್ಟಲ್ಗೆ ಆಶಾ ಪ್ರೋತ್ಸಾಹ ಧನ ಜೋಡಣೆ ರದ್ದು ಪಡಿಸ ಬೇಕು.
10 ತಿಂಗಳಿಂದ ಬಾಕಿ ಇರುವ ಎಂಸಿಟಿಎಸ್‌ ಸೇವೆಗಳ ಪ್ರೋತ್ಸಾಹ ಧನವನ್ನು ಪ್ರತಿ ಕಾರ್ಯಕರ್ತೆಯರಿಗೆ 1000 ಜನ ಸಂಖ್ಯೆಗೆ ಮಾಸಿಕ 3,000 ರೂ. ನಂತೆ ನೀಡುವುದು ಮತ್ತು ಅದನ್ನು ಹೆಚ್ಚಿಸುವುದು ಅಥವಾ 9 ತಿಂಗಳಲ್ಲಿ ಮಾಡಿದ ಕೆಲಸದ ವರದಿ ಸಂಗ್ರಹಿಸಿ ಪ್ರೋತ್ಸಾಹ ಧನ ಪಾವತಿಸಬೇಕು.
 ಬಾಕಿ ಪ್ರೋತ್ಸಾಹ ಧನವನನ್ನು ಏಕ ಗಂಟಿನಲ್ಲಿ ನೀಡುವುದು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ.
ನಿವೃತ್ತರಾಗುವ ಆಶಾಗಳಿಗೆ ಪಿಂಚಣಿ, ನಿವೃತ್ತಿ ಪರಿಹಾರ ನೀಡುವುದು.
 ಹೆರಿಗೆ ರಜೆ ಸೌಲಭ್ಯ ಮತ್ತು ರಜೆಯಲ್ಲಿ ಗೌರವ ಧನ ಪಾವತಿ.
 ಸರ್ವೆ, ಜಿಲ್ಲಾ- ತಾಲೂಕು ಕೇಂದ್ರದ ಸಭೆಗೆ ಕನಿಷ್ಠ 300 ರೂ. ದಿನ ಭತ್ತೆ.

Advertisement

Udayavani is now on Telegram. Click here to join our channel and stay updated with the latest news.

Next