Advertisement

ಕೋವಿಡ್ ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆ ಸಾವು! ಮೆದುಳು ಕಾಯಿಲೆ ಎಂದ ವೈದ್ಯರು

01:39 PM Feb 06, 2021 | Team Udayavani |

ಬೆಳಗಾವಿ: ಕಳೆದ ತಿಂಗಳು ಕೋವಿಡ್ ಲಸಿಕೆ ಪಡೆದಿದ್ದ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ‌. ಆದರೆ ಅವರಿಗೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ ಇತ್ತು. ಕೋವಿಡ್ ಲಸಿಕೆಯಿಂದ ಮೃತಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಸ್ ವಿ ಮುನ್ಯಾಳ ಸ್ಪಷ್ಟಪಡಿಸಿದ್ದಾರೆ.

Advertisement

ಕಳೆದ ಜನವರಿ 22 ರಂದು ಕೋವಿಡ್ ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆಗೆ ಮೊದಲಿಂದಲೂ ತಲೆನೋವು ಮೊದಲಾದ ಕಾಯಿಲೆಗಳಿದ್ದವು. ಜನವರಿ 30 ರಂದು ಸತತವಾಗಿ ವಾಂತಿಯಾಗಿದೆ. ನಂತರ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಆದರೆ ಫೆ.3 ರಂದು ಮೃತಪಟ್ಟಿದ್ದಾರೆ‌. ಮೆದುಳಿನಲ್ಲಿ ರಕ್ತದ ಸಂಚಾರ ಸರಿಯಾಗಿರಲಿಲ್ಲ ಎಂದು ಡಾ ಎಸ್.ವಿ ಮುನ್ಯಾಳ ‘ಉದಯವಾಣಿ’ ಗೆ ತಿಳಿಸಿದರು.

ಇದನ್ನೂ ಓದಿ:ದೇವದಾಸಿ ಕುಟುಂಬದ ಹನಮವ್ವಳಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ

33 ವರ್ಷದ ಆಶಾ ಕಾರ್ಯಕರ್ತೆಯ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಇದರ ಬಗ್ಗೆ ಇಲಾಖೆಯ ಮುಖ್ಯಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next