Advertisement

ಅಸೇಲ ಗುಣರತ್ನೆ ಆಡುವುದು ಅನುಮಾನ

07:15 AM Jul 27, 2017 | Team Udayavani |

ಗಾಲೆ: ಪ್ರವಾಸಿ ಭಾರತ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್‌ ವೇಳೆ ಫೀಲ್ಡಿಂಗ್‌ ಮಾಡುತ್ತಿದ್ದ ಅಸೇಲ ಗುಣರತ್ನೆ ಅವರ ಎಡ ಹೆಬ್ಬೆರಳಿಗೆ ಗಾಯವಾಗಿದೆ. ಇದರಿಂದ ಅವರು ಪಂದ್ಯದ ಇನ್ನುಳಿದ ದಿನ ಮತ್ತು ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.

Advertisement

ಬೆಳಗ್ಗಿನ  ಅವಧಿಯಲ್ಲಿ 14ನೇ ಓವರ್‌ ವೇಳೆ ಧವನ್‌ ನೀಡಿದ ಕ್ಯಾಚನ್ನು ಪಡೆಯುವ ಯತ್ನದಲ್ಲಿ ಗುಣರತ್ನೆ ಅವರಿಗೆ ಗಾಯವಾಗಿತ್ತು. ಕ್ಯಾಚ್‌ ಪಡೆಯಲು ಅವರು ಎಡ ಕಡೆಗೆ ಹಾರಿದ್ದರು. ಗಾಲೆಯಲ್ಲಿ ಪ್ರಾಥಮಿಕ ಪರೀಕ್ಷೆಯ ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ಕೊಲಂಬೊಗೆ ಕೊಂಡೊಯ್ಯಲಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೆ ಎಂಬುದು ನಿರ್ಧಾರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next