Advertisement
ದಕ್ಷಿಣ ಸಮುದ್ರ ಚೀನ ವ್ಯಾಪ್ತಿಯಲ್ಲಿ ಚೀನದ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಟ್ಟುಕೊಂಡು ಮಾತನಾಡಿದ ಪ್ರಧಾನಿ ಮೋದಿ, 1990ರಿಂದ ಈಚೆಗೆ ಭಾರತವು ಆಸಿಯಾನ್ ರಾಷ್ಟ್ರಗಳ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದೆ. ಶಾಂತಿ, ಪ್ರಗತಿ ಮತ್ತು ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ಹಾಕಿಕೊಂಡಿರುವ ಯೋಜನೆ ಯಶಸ್ವಿಯಾಗಿದೆ. ಭಾರತದ 121 ಕೋಟಿ ಜನಸಂಖ್ಯೆಗೆ ನಮ್ಮ ಹಾಜರಿಯ ಅರಿವು ಉಂಟಾಗಿದೆ’ ಎಂದರು. ವ್ಯೂಹಾತ್ಮಕವಾಗಿ ಮತ್ತು ರಾಜತಾಂತ್ರಿಕವಾಗಿ ಆಸಿಯಾನ್ ಮಹತ್ವ ಪ್ರಸ್ತಾಪಿಸಿದ ಪ್ರಧಾನಿ ಮೋದಿ, “ನಮ್ಮ ನಡುವಿನ ಸ್ನೇಹ ಮತ್ತು ಬಾಂಧವ್ಯ ಇತಿಹಾಸ ಕಾಲದ ಸಂಸ್ಕೃತಿ ಮತ್ತು ನಾಗರಿಕತೆಯಿಂದಲೂ ನಡೆದುಕೊಂಡು ಬಂದಿದೆ.
Related Articles
Advertisement
ಔತಣಕೂಟದಲ್ಲಿ ಅಸ್ಸಾಂ ಸಿಎಂ: ಆಸಿಯಾನ್ ರಾಷ್ಟ್ರಗಳ ನಾಯಕರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಆಯೋಜಿಸಿರುವ ಔತಣಕೂಟದಲ್ಲಿ ಅಸ್ಸಾಂ ಸಿಎಂ ಸರ್ವಾನಂದ ಸೊನೊವಾಲ್ ಭಾಗವಹಿಸಿದ್ದರು. ಆಸಿಯಾನ್ ರಾಷ್ಟ್ರಗಳ ಜತೆಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಷ್ಟ್ರಗಳು ಗಡಿಯನ್ನು ಹೊಂದಿವೆ. ಹೀಗಾಗಿ ಇವರ ಉಪಸ್ಥಿತಿ ಗಮನ ಸೆಳೆಯಿತು.
ವಿಶೇಷ ಪ್ರಸಾರಕ್ಕೆ ಸಿದ್ಧತೆ: ಈ ಬಾರಿಯ ಗಣರಾಜ್ಯದಿನದ ಕಾರ್ಯಕ್ರಮ ನೇರ ಪ್ರಸಾರಕ್ಕೆ ದೂರದರ್ಶನ ವಿಶೇಷ ವ್ಯವಸ್ಥೆ ಮಾಡಿದೆ. ಇಂಡಿಯಾ ಗೇಟ್‌ನಿಂದಲೂ ದೂರದ ದೃಶ್ಯಗಳನ್ನು ಸೆರೆ ಹಿಡಿಯಲು 38 ಕ್ಯಾಮೆರಾ ಬಳಸಿಕೊಳ್ಳಲಿದ್ದೇವೆ ಎಂದು ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್ ತಿಳಿಸಿದ್ದಾರೆ. ಭಾಗವಹಿಸಿರುವವರ ಅಭಿಪ್ರಾಯ ಸೆರೆ ಹಿಡಿಯಲೋಸುಗವೇ ರೋಬೋಟಿಕ್ ಕ್ಯಾಮೆರಾ ಬಳಸಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ, ದಿಲ್ಲಿಯಾದ್ಯಂತ ಬಂದೋಬಸ್ತ್ ಕಲ್ಪಿಸಲಾಗಿದ್ದು, 50 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚೀನದಿಂದ ಎಚ್ಚರಿಕೆಯ ಪ್ರತಿಕ್ರಿಯೆ: ಹೊಸದಿಲ್ಲಿಯಲ್ಲಿ ಆಸಿ ಯಾನ್ ನಾಯಕರ ಸಭೆ ಸೇರುವಿಕೆಯ ಬಗ್ಗೆ ಚೀನ ವಿದೇಶಾಂಗ ಇಲಾಖೆ ವಕ್ತಾರ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. “ಶಾಂತಿಗಾಗಿ ಎಲ್ಲಾ ರಾಷ್ಟ್ರಗಳು ಜತೆಗೂಡಿ ಪ್ರಯತ್ನ ನಡೆಸಬೇಕು. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು’ ಎಂದಿದ್ದಾರೆ. ಸಭೆ ಚೀನ ವಿರುದ್ಧವಾಗಿಯೇ ಇದೆ ಎಂದು ವರದಿ ಮಾಡಿರುವ ಭಾರತದ ಮಾಧ್ಯಮಗಳನ್ನು ಟೀಕಿಸಿರುವ ವಕ್ತಾರರು “ಭಾರತದ ಮಾಧ್ಯಮ ವಿಶ್ವಾಸಕ್ಕೆ ಅರ್ಹವಲ್ಲ ಮತ್ತು ಅವುಗಳು ನಮ್ಮನ್ನು ನಂಬುವುದಿಲ್ಲ’ ಎಂದು ಹೇಳಿದ್ದಾರೆ.
ರಾಹುಲ್‌ಗೆ 4ನೇ ಸಾಲಲ್ಲಿ ಆಸನಕ್ಕೆ ಕಾಂಗ್ರೆಸ್ ಕಿಡಿ69ನೇ ಗಣರಾಜ್ಯದಿನದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಾಲ್ಕನೇ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿದ್ದಕ್ಕೆ ಪಕ್ಷ ಕಿಡಿಕಿಡಿಯಾಗಿದೆ. ಇದು ಪಕ್ಷದ ನಾಯಕತ್ವಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಪ್ರತಿಪಕ್ಷದ ಅಧ್ಯಕ್ಷರಿಗೆ ಮೊದಲ ಸಾಲಿನಲ್ಲಿಯೇ ಅವಕಾಶ ನೀಡಲಾಗುತ್ತಿತ್ತು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಪ್ರಮುಖರಿಗೆ ಆಸನ ನಿಗದಿ ಬಗ್ಗೆ ಕೇಂದ್ರದಿಂದ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.