Advertisement

UP Encounter: ಅಸದ್‌ ಅಂತ್ಯಕ್ರಿಯೆಗೆ ತಂದೆ ಅತೀಖ್‌ಗೂ ಸಿಗಲಿಲ್ಲ ಪ್ರವೇಶ

09:14 PM Apr 15, 2023 | Team Udayavani |

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪಾತಕಿ-ರಾಜಕಾರಣಿ, ಸದ್ಯ ಜೈಲಿನಲ್ಲಿರುವ ಅತೀಖ್‌ ಅಹ್ಮದ್‌ ಅನುಪಸ್ಥಿತಿಯಲ್ಲಿ ಅವರ ಪುತ್ರ, ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತನಾದ ಗ್ಯಾಂಗ್‌ಸ್ಟರ್‌ ಅಸದ್‌ ಅಹ್ಮದ್‌ ಅಂತ್ಯಕ್ರಿಯೆ ಶನಿವಾರ ನಡೆಯಿತು.

Advertisement

ಕೆಲವು ಸಂಬಂಧಿಕರು ಮತ್ತು ಸ್ಥಳೀಯರ ಉಪಸ್ಥತಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಪ್ರಯಾಗ್‌ರಾಜ್‌ನ ಕಸರಿ ಮಸರಿ ಸ್ಮಶಾನದಲ್ಲಿ ಅಸದ್‌ ಅಹ್ಮದ್‌ ಅಂತ್ಯಕ್ರಿಯೆ ನೆರವೇರಿತು. ಮಾಧ್ಯಮದವರಿಗೂ ಸಹ ಸ್ಮಶಾನದ ಒಳಗೆ ಪ್ರವೇಶ ನಿರಾಕರಿಸಲಾಗಿತ್ತು. ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎದುರು ಶುಕ್ರವಾರ ಅತೀಖ್‌ ಅನುಮತಿ ಕೋರಿದ್ದ. ಆದರೆ ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಕೋರ್ಟ್‌ಗೆ ರಜೆ ಇತ್ತು. ಹೀಗಾಗಿ ಅನುಮತಿ ದೊರೆಯುವ ಮೊದಲೇ ಅಸದ್‌ ಅಂತ್ಯಕ್ರಿಯೆ ಪೂರ್ಣಗೊಂಡಿತು.

ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಅಸದ್‌ ಮತ್ತು ಗುಲಾಮ್‌ ತಲೆಮರೆಸಿಕೊಂಡಿದ್ದರು. ಝಾನ್ಸಿ ಸಮೀಪ ಗುರುವಾರ ಪೊಲೀಸರು ಮತ್ತು ಅಸದ್‌ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅಸದ್‌ ಅಸುನೀಗಿದ. ಅತೀಖ್‌ ಪುತ್ರರ ಪೈಕಿ ಹಿರಿಯನಾದ ಉಮರ್‌ ಲಕ್ನೋ ಜೈಲಿನಲ್ಲಿದ್ದಾನೆ. ಎರಡನೆಯವನಾದ ಅಲಿ, ನೈನಿ ಕೇಂದ್ರ ಕಾರಾಗೃಹದಲ್ಲಿ ಹಾಗೂ ಅಜಂ ಮತ್ತು ಅಬನ್‌ ಪ್ರಯಾಗ್‌ರಾಜ್‌ನ ಬಾಲಾಪರಾಧಿ ಗೃಹದಲ್ಲಿ ಇದ್ದಾರೆ.

ಅಸದ್‌ ಅಹ್ಮದ್‌ ಎನ್‌ಕೌಂಟರ್‌ ನಕಲಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್‌ ಒವೈಸಿ, ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next