Advertisement

ಅಜರ್‌ ಅಲಿ, ಅಸದ್‌ ಶಫೀಕ್‌ ಶತಕ

06:10 AM Dec 06, 2018 | Team Udayavani |

ಅಬುಧಾಬಿ: ಅಜರ್‌ ಅಲಿ ಮತ್ತು ಅಸದ್‌ ಶಫೀಕ್‌ ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್‌ ಎದುರಿನ ಅಬುಧಾಬಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನ 74 ರನ್‌ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. 

Advertisement

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡ್‌ 3ನೇ ದಿನದ ಅಂತ್ಯಕ್ಕೆ 2 ವಿಕೆಟಿಗೆ 26 ರನ್‌ ಗಳಿಸಿ ಸಂಕಟಕ್ಕೆ ಸಿಲುಕಿದೆ.

ನ್ಯೂಜಿಲ್ಯಾಂಡಿನ 274 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬು ನೀಡುತ್ತಿದ್ದ ಪಾಕಿಸ್ಥಾನ 2ನೇ ದಿನದ ಅಂತ್ಯಕ್ಕೆ 3ಕ್ಕೆ 139 ರನ್‌ ಗಳಿಸಿತ್ತು. 62ರಲ್ಲಿದ್ದ ಅಜರ್‌ ಅಲಿ 134 ರನ್‌ ಬಾರಿಸಿದರು (297 ಎಸೆತ, 12 ಬೌಂಡರಿ). ಇದು ಅವರ 15ನೇ ಶತಕ. 26 ರನ್‌ ಮಾಡಿದ್ದ ಅಸದ್‌ ಶಫೀಕ್‌ 104 ರನ್‌ ಹೊಡೆದು 12ನೇ ಶತಕ ಸಂಭ್ರಮ ಆಚರಿಸಿದರು (259 ಎಸೆತ, 14 ಬೌಂಡರಿ). ಈ ಜೋಡಿಯಿಂದ 3ನೇ ವಿಕೆಟಿಗೆ 201 ರನ್‌ ಒಟ್ಟುಗೂಡಿತು.

Advertisement

Udayavani is now on Telegram. Click here to join our channel and stay updated with the latest news.

Next