Advertisement

ಸಸ್ಯಾಹಾರಿಗಳಾಗಿ: ಆರೆಸ್ಸೆಸ್‌ 

03:05 AM Jul 16, 2017 | |

ಹೊಸದಿಲ್ಲಿ: “ಸಸ್ಯಾಹಾರ ಮಾತ್ರ ಸೇವಿಸಿ, ಸೀರೆ ಉಟ್ಟುಕೊಳ್ಳಿ, ಕುಟುಂಬದವರ ಜತೆ ಕ್ರಿಕೆಟ್‌, ಸಿನಿಮಾಗಳ ಬಗ್ಗೆ ಚರ್ಚಿ ಸಬೇಡಿ.’ ಇದು ಆರ್‌ಎಸ್‌ಎಸ್‌ನ “ಕುಟುಂಬ ಪ್ರಬೋ ಧನ’ ಕಾರ್ಯಕ್ರಮದಲ್ಲಿ ಬೋಧಿಸಲಾಗುತ್ತಿರುವ ವಿಷಯಗಳು.

Advertisement

ದೇಶದಲ್ಲಿ ಗೋಹತ್ಯೆಯಂಥ ವಿಚಾರಗಳು ಹೆಚ್ಚು ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಸಸ್ಯಾಹಾರದತ್ತ ಜನರ ಮನಸ್ಸನ್ನು ಸೆಳೆಯಲು ಮುಂದಾಗಿರುವ ಆರೆಸ್ಸೆಸ್‌, ಅದರ ಜತೆಗೆ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಕೈಹಾಕಿದೆ. ಅದರಂತೆ, ಕಳೆದ ಎಪ್ರಿಲ್‌ನಲ್ಲಿ “ಕುಟುಂಬ ಪ್ರಬೋ ಧನ’ ಹೆಸರಿನಲ್ಲಿ ಕುಟುಂಬ ಸಮಾಲೋಚನೆ ಆಂದೋಲನ ಆರಂಭಿಸಿದ್ದು, ಇದು 2019ರ ಲೋಕಸಭಾ ಚುನಾವಣೆವರೆಗೂ ನಡೆಯಲಿದೆ. 

ಸಂಘದ ಹಿರಿಯ ಸದಸ್ಯರು ಹಿಂದೂಗಳ ಮನೆ ಮನೆಗೆ ತೆರಳಿ ಹಿಂದೂ ಸಂಸ್ಕೃತಿಯ ಮಹತ್ವದ ಬಗ್ಗೆ, ವಿದೇಶಿ ಸಂಸ್ಕೃ ತಿಯ ಪ್ರಭಾವದಿಂದ ದೂರ ಉಳಿಯುವುದು ಹೇಗೆ ಎಂಬ ಬಗ್ಗೆ, ಸಸ್ಯಾಹಾರದ ಲಾಭಗಳು, ಸಾಮಾಜಿಕ ಜಾಲ ತಾಣ, ಟಿವಿ ಧಾರಾವಾಹಿ ಪ್ರಭಾವಕ್ಕೆ ಒಳಗಾಗದಂತೆ ಇರುವುದು ಹೇಗೆ ಎಂಬ ವಿಷಯಗಳ ಬಗ್ಗೆ ಶಿಕ್ಷಣ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next