Advertisement
ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ತರಗತಿಗೆ ಗೈರಾಗದಿರುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಅಣಕು ಪರೀಕ್ಷೆಗಳಲ್ಲಿ ಭಾಗವಹಿಸುವುದು. ಇದಕ್ಕೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸುವುದು. ಹಿರಿಯ ವಿದ್ಯಾರ್ಥಿಗಳ ಸಲಹೆ- ಮಾರ್ಗದರ್ಶನ ಪಡೆಯಬೇಕು. ಮೊಬೈಲ್ ಬಳಕೆಗೆ ಸ್ವಯಂ ನಿಷೇಧ ವಿಧಿಸಿ, ಹೆಚ್ಚು ಸಮಯ ಲೈಬ್ರರಿಯಲ್ಲಿ ಸೆರೆಯಾಗುವಂತಾಗಬೇಕು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಮುಖ್ಯವಾದುವುಗಳು. ಚುಟುಕಾಗಿ ಹೇಳಬೇಕೆಂದರೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು.
ಈ ಎಲ್ಲಾ ಸಂಗತಿಗಳು ನಿಮಗೆ ಗೊತ್ತಿಲ್ಲದವೇನಲ್ಲ. ಆದರೆ ಅವುಗಳನ್ನು ಅನುಸರಿಸದಿರುವುದೇ ನಾವು ಮಾಡುವ ತಪ್ಪು. ಮುಖ್ಯವಾಗಿ ಒಂದು ಮಾತನ್ನು ಚೆನ್ನಾಗಿ ನೆನಪಿಡಿ. ನಾವು ಆಯ್ದುಕೊಂಡ ಕೋರ್ಸ್‌ಗ ಳನ್ನು ಮೇಲೆ ನಮಗೆ ಅಪಾರ ಪ್ರೀತಿ ಇರಬೇಕು. ನಾವು ನಮ್ಮ ಕೋರ್ಸನ್ನು ಪ್ರೀತಿಸಬೇಕು. “ನನ್ನ ಗುರಿ ತಲುಪಲು ನಾನೇ ಹೋರಾಡುತ್ತೇನೆ’ ಎಂದು ಅಂದುಕೊಂಡ ಘಳಿಗೆಯಲ್ಲಿ ಅಡಗಿದೆ ನೋಡಿ ಯಶಸ್ಸಿನ ಸೀಕ್ರೆಟ್. ಹೇಗೆ ಅರ್ಜುನನಿಗೆ ಮರದ ಮೇಲೆ ಕುಳಿತ ಪಕ್ಷಿಯ ಕಣ್ಣಿನ ಹೊರತು ಬೇರೇನೂ ಕಾಣಿಸಲಿಲ್ಲವೋ, ಹಾಗೆಯೇ ನಮಗೆ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರದ ಹೊರತು ಬೇರೇನೂ ಕಾಣದಂತಿರಬೇಕು. ಸಮಯ ಮುಖ್ಯ
ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ ಅಗತ್ಯ ಕಡಿಮೆ ಏನಲ್ಲ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ವರೆಗೆ ವಿದ್ಯಾರ್ಥಿಗಳು ಸಮಯವನ್ನು ಹೊಂದಿಸಿಕೊಳ್ಳುವುದು ಮುಖ್ಯ. ಹೀಗೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯ.
Related Articles
ಕಾಲೇಜಿಗೆ ಬರುವ ಸಮಯವನ್ನು ಸರಿಯಾಗಿ ನಿಗದಿಪಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ವಿಚಾರಗೋಷ್ಠಿ, ಕಾರ್ಯ ಯೋಜನೆಯಂತಹ ಪಠ್ಯೇತರ ಚಟುವಟಿಕೆಗಳನ್ನು ಹೇಳಿದ ಸಮಯಕ್ಕೆ ಸರಿಯಾಗಿ ಹಾಜರುಪಡಿಸುವುದು. ಜತೆಗೆ ಅಂತಹ ಚಟುವಟಿಕೆಗಳನ್ನು ಸಮಯಕ್ಕಿಂತ ಮೊದಲೇ ಮಾಡಿ ಮುಗಿಸುವುದು ಉತ್ತಮ. ಅವಸರದಲ್ಲಿ ಮಾಡಿದರೆ ಅದರ ಮೌಲ್ಯ ಕುಸಿಯುತ್ತದೆ.
Advertisement
ಮೊಬೈಲ್ ಬಳಕೆಗೆ ಮಿತಿ ಇರಲಿಇಂದು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಕಸಿದುಕೊಳ್ಳುತ್ತಿವೆ. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿದರೂ ಅದರ ಬಳಕೆ ಕಡಿಮೆಯಾಗುತ್ತಿಲ್ಲ. ಸಮಯವನ್ನು ಹೊಂದಿಸಿಕೊಂಡು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಯಶಸ್ಸು ನಿಮ್ಮದಾಗುತ್ತದೆ. ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ತಪ್ಪಲ್ಲ. ಆದರೆ ಅವುಗಳ ಬಳಕೆಗೆ ಮಿತಿ ಇರಲಿ. ವೇಳಾ ಪಟ್ಟಿ
ಸಮಯದ ಪರಿಪಾಲನೆಗೆ ಒಂದು ಉತ್ತಮ ಅಭ್ಯಾಸ ಕೆಲಸಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ಅಂದಿನ ಕೆಲಸದ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಕಾರ್ಯಗಳನ್ನು ಮಾಡತೊಡಗಿದರೆ ಯಾವುದೇ ಸಮಸ್ಯೆಯಾಗದು. ಆ ದಿನ ಕೆಲಸಗಳು ಸಲೀಸಾಗಿ ಮಾಡಿಕೊಂಡು ಹೋಗಲು ಹಾಗೂ ಸಮಯ ನಿರ್ವಹಣೆ ಕೂಡ ಸರಿಯಾಗಿ ಆಗುತ್ತದೆ. ವಿದ್ಯಾರ್ಥಿಗಳಂತೂ ಈ ವೇಳಾಪಟ್ಟಿಯನ್ನು ತಯಾರಿಸಿದ್ದಲ್ಲಿ ವಿದ್ಯಾಭ್ಯಾಸ, ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸರಿಯಾಗಿ ಹೊಂದಿಸಿ ಕೊಳ್ಳಲು ಸಾಧ್ಯ. ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಎಂಬುದಕ್ಕೆ ಈ ವೇಳಾಪಟ್ಟಿ ಉತ್ತರ ನೀಡುತ್ತದೆ. ಕಷ್ಟದ ವಿಷಯಕ್ಕೆ ಹೆಚ್ಚು ಸಮಯ
ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಲೇಬೇಕಾಗುತ್ತದೆ. ಆದರೆ ಅದಕ್ಕೂ ಒಂದು ಉತ್ತಮ ಪೂರ್ವ ಯೋಜನೆ ಬೇಕು. ಸಮಯದ ಹೊಂದಾಣಿಕೆ ಇಲ್ಲದೆ ಪರೀಕ್ಷೆಯನ್ನು ಯಶಸ್ವಿ ಯಾಗಿ ಎದುರಿಸಲು ಸಾಧ್ಯವೇ ಇಲ್ಲ. ಪರೀಕ್ಷೆಗೆ ಒಂದೆರಡು ತಿಂಗಳ ಮೊದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಪ್ರತಿಯೊಂದು ವಿಷಯಕ್ಕೂ ಇಂತಿಷ್ಟೇ ಸಮಯವನ್ನು ಮೀಸಲಿಡಬೇಕು. ಯಾವ ವಿಷಯ ಹೆಚ್ಚು ಕಷ್ಟವೋ ಅದಕ್ಕಾಗಿ ಅಧಿಕ ಸಮಯ ಮೀಸಲಿಡುವುದು ಒಳಿತು. - ಅಭಿಮನ್ಯು