Advertisement

ರಾಜ್ಯ ಸರಕಾರ ನುಡಿದಂತೆ ನಡೆದಿದೆ: ಪ್ರತಿಭಾ

11:44 AM Oct 31, 2017 | |

ಸುರತ್ಕಲ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರ ಸಾಲ ಮನ್ನಾ, ಬಡ ವರ್ಗಕ್ಕೆ ಉಚಿತ ಅಕ್ಕಿ ವಿತರಣೆ ಹಾಗೂ ಗರ್ಭಿಣಿಯರಿಗಾಗಿ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರುವ ಮೂಲಕ ನುಡಿದಂತೆ
ನಡೆಯುವ ಸರಕಾರ ಎಂದು ಗುರುತಿಸಿಕೊಂಡಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಕಾರ್ಯದರ್ಶಿ ಪ್ರತಿಭಾ
ಕುಳಾಯಿ ಹೇಳಿದರು.

Advertisement

ಸುರತ್ಕಲ್‌ನ 7ನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಕಾರ್ಯಕರ್ತರು ಪಕ್ಷವನ್ನು 2018ರಲ್ಲಿ ಮತ್ತೆ ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದರು.

ಕಾರ್ಪೊರೇಟರ್‌ ಅಶೋಕ್‌ ಶೆಟ್ಟಿ, ವಾರ್ಡ್‌ ಮುಖಂಡರಾದ ರಾಜೇಶ್‌ ಸುವರ್ಣ, ಐ.ಇಸ್ಮಾಯಿಲ್‌, ಗುರುರಾಜ್‌
ಆಚಾರ್ಯ, ಲಕ್ಷ್ಮೀಧರಗಿರಿ, ಶ್ರೀಕಾಂತ್‌ ಸಾಲ್ಯಾನ್‌, ಯಶೋಧರ್‌ ಕರ್ಕೇರ, ದಿವಾಕರ್‌ ಕುಂದರ್‌, ನಯಾಝ್,
ಯೋಗೀಶ್‌ ಅಮೀನ್‌, ಹೇಮಂತ್‌ ಕುಮಾರ್‌, ಗೋವರ್ಧನ್‌ ಶೆಟ್ಟಿಗಾರ್‌, ಸಿಪ್ರಿಯಾನ್‌ ಡಿ’ಸೋಜಾ, ಅನಿತಾ ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next