Advertisement
ಅದರಲ್ಲೂ ನಮ್ಮ ದೇಶದಲ್ಲಿ 141 ಕೋಟಿ ಮಂದಿ ಜನರು ಇದ್ದಾರೆ. ಮುಂದಿನ ವರ್ಷ ನಾವು ಜನಸಂಖ್ಯೆಯಲ್ಲಿ ಚೀನವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ ಎಂಬ ಬಗ್ಗೆ ವಿಶ್ವಸಂಸ್ಥೆ ಸೇರಿದಂತೆ ಹಲವು ಪರಿಣತ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ನಮ್ಮ ದೇಶದಲ್ಲಿ 2050ರ ವೇಳೆಗೆ 166 ಕೋಟಿಗೆ ಏರಿಕೆಯಾಗಲಿದೆ.
Related Articles
Advertisement
ಜನಸಂಖ್ಯೆ 800 ಕೋಟಿ ದಾಟಿದ್ದನ್ನು ವಿಶ್ವಸಂಸ್ಥೆ “ಅತ್ಯುತ್ತಮ ಮೈಲುಗಲ್ಲು’ ಎಂದು ಘೋಷಣೆ ಮಾಡಿದೆ ನಿಜ. ಆದರೆ ಅಂಥ ಅವಕಾಶಗಳು ಇವೆಯೇ ಎಂದು ನೋಡಬೇಕಾಗುತ್ತದೆ. ಇದರ ಜತೆಗೆ ಜಗತ್ತಿನಲ್ಲಿ ಜನಸಂಖ್ಯೆಯ ಏರಿಕೆ ನಿಧಾನವಾಗುತ್ತಿದೆ ಎಂದೂ ವಿಶ್ವಸಂಸ್ಥೆ ಹೇಳಿಕೊಂಡಿದೆ.
ಒಟ್ಟಾರೆಯಾಗಿ ಹೇಳಿಕೊಂಡಾಗ ಎಲ್ಲ ವ್ಯವಸ್ಥೆಯೂ ಸುಧಾರಣೆ ಆಗಿರುವುದರಿಂದ ಜನಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಆದರೆ ಸದ್ಯಕ್ಕೆ ಈ ಅಂಶ ಮಾರಕವಾಗಿ ಪರಿಣಮಿಸಲಿದೆ ಎನ್ನುವುದು ಹಗಲಿನಷ್ಟೇ ಸತ್ಯ. ಹಾಗೆಂದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದರೆ ಅದು ಕಷ್ಟವಾಗಲಾರದು ನಿಜ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮತ್ತು ಪುರುಷರಲ್ಲಿ ಫಲವತ್ತತೆ ಕ್ಷೀಣಿಸುತ್ತಿದೆ. ಒಂದು ಅಧ್ಯಯನದ ಪ್ರಕಾರ 1950ರಲ್ಲಿ ಫಲವತ್ತತೆ ಪ್ರಮಾಣ 4.86 ಇದ್ದದ್ದು 2100ರ ವೇಳೆ 1.84ಕ್ಕೆ ಇಳಿಕೆಯಾಗಿದೆ. ಸಾವಿನ ಪ್ರಮಾಣ 46.46 ಇದ್ದದ್ದು 2100ರ ವೇಳೆಗೆ 82.6ಕ್ಕೆ ಏರಿಕೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಜಗತ್ತಿನ ಸರಕಾರಗಳು ಜನಸಂಖ್ಯೆಯ ನಿಯಂತ್ರಣದತ್ತ ಗಮನ ಹರಿಸಬೇಕಾಗಿದೆ.
ಹೀಗೆ ಉಲ್ಲೇಖಿಸಲು ಕಾರಣವೂ ಇದೆ. ಈಗಿನ ಜನಸಂಖ್ಯೆಗೇ ಮೂಲ ಸೌಕರ್ಯ ಒದಗಿಸಲು ಸರಕಾರಗಳು ಪರದಾಡುತ್ತಿರುವ ಸಂದರ್ಭದಲ್ಲಿ ಇನ್ನು ಹೆಚ್ಚಾಗುತ್ತಿರುವ ಜನರಿಗೆ ಸೌಲಭ್ಯ ಒದಗಿಸಲು ಹೇಗೆ ಸಾಧ್ಯ ಎನ್ನುವುದು ಪ್ರಾಥಮಿಕ ಪ್ರಶ್ನೆಯಾಗುತ್ತದೆ.