Advertisement

ಜೆಡಿಎಸ್‌ ಬಲವರ್ಧನೆಗೆ ಅಣಿಯಾಗಿ

01:29 PM Jan 25, 2022 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಜೆಡಿಎಸ್‌ ಬಲವರ್ಧನೆಗೆ ಕಾರ್ಯಕರ್ತರು ಅಣಿಯಾಗಬೇಕು. 2023ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮತ್ತೂಮ್ಮೆ ಮುಖ್ಯಮಂತ್ರಿಯನ್ನಾಗಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಶಾಸಕ ವೆಂಕಟರಾವ್‌ ನಾಡಗೌಡ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್‌ನ ರಾಯಚೂರು ಜಿಲ್ಲಾ ಸದಸ್ಯತ್ವ ನೋಂದಣಿ ಮತ್ತು ಸಂಘಟನೆ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತ ನೋಡಿ ಜನರು ಬೇಸತ್ತು ಹೋಗಿದ್ದಾರೆ. ಕುಮಾರಸ್ವಾಮಿ ಅವಧಿಯಲ್ಲಿ ಜನ್ನಮನ್ನಣೆ ಕಾರ್ಯಕ್ರಮಗಳು ನೀಡಿದ್ದರು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬುದು ಜಿಲ್ಲೆಯ ಜನರ ಬಯಕೆಯಾಗಿದೆ ಎಂದರು.

ಪ್ರತಿ ವಿಧಾನಸಭೆ ಕ್ಷೇತ್ರದ ಬೂತ್‌ ಮಟ್ಟದ ಕಮಿಟಿ ರಚಿಸಲಾಗುವುದು. ಮುಂಬರುವ ಎಲ್ಲ ಸ್ಥಾಂಸಿಕ ಚುನಾವಣೆಗಳಿಗೆ ತಯಾರಿ ನಡೆಸಬೇಕು. ಜಲಧಾರೆ ಯಾತ್ರೆಯ ಲಿಂಗಸುಗೂರು ತಾಲೂಕಿನಿಂದ ರಾಯಚೂರಿನಲ್ಲಿ ಪ್ರಾರಂಭಿಸಿ ಜಿಲ್ಲೆಯ ನೀರಾವರಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳಿಂದ ರೈತರಿಗೆ, ಜನರಿಗೆ ಯಾವುದು ಪ್ರಯೋಜನವಾಗಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಎದೆಗುಂದದೆ ಸಂಘಟನೆಗೆ ಮುಂದಾಗಬೇಕು. ನಮ್ಮ ಪಕ್ಷ ಜನಪರವಾಗಿದೆ. ಬೂತ್‌ ಕಮಿಟಿ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಷದ ನೋಂದಣಿ ಮಾಡಿಸುವುದರಿಂದ ಪಕ್ಷದ ಸಂಘಟನೆಯ ಬಲವರ್ಧನೆ ಆಗುತ್ತದೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸಬಹುದು ಎಂದರು. ಕಾರ್ಯಾಧ್ಯಕ್ಷ ಎನ್‌.ಶಿವಶಂಕರ ವಕೀಲ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ನತ್ತ ಜನರ ಒಲವಿದೆ. ಪಕ್ಷದಿಂದ ನಾನು ಎಂಬ ಭಾವನೆ ಎಲ್ಲ ಮುಖಂಡರಲ್ಲಿ ಬಂದರೆ ಮಾತ್ರ ಪಕ್ಷ ಸಂಘಟನೆಯು ಬಲಿಷ್ಠವಾಗಲು ಸಾಧ್ಯ ಎಂದರು.

ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್‌, ಹಿರಿಯ ಮುಖಂಡರಾದ ರವಿಪಾಟೀಲ್‌, ಕರೆಮ್ಮ ನಾಯಕ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನಕುಮಾರ, ರಾಜ್ಯ ಕಾರ್ಯದರ್ಶಿ ಗಾಣದಾಳ ಲಕ್ಷ್ಮೀಪತಿ, ಮುಖಂಡ ಯೂಸುಫ್‌ ಖಾನ್‌, ದಾನಪ್ಪ ಯಾದವ, ಬಿ.ತಿಮ್ಮಾರೆಡ್ಡಿ, ಬಸವರಾಜ ನಾಡಗೌಡ, ಬುಡ್ಡನಗೌಡ, ಮಲ್ಲಿಕಾರ್ಜುನ ಪಾಟೀಲ, ನಿಜಾಮುದ್ದಿನ್‌, ಅಮರೇಶ ಪಾಟೀಲ್‌, ಯಲ್ಲಪ್ಪ, ಜಂಬುನಾಥ, ಖಾಸಿಂ ನಾಯಕ, ಅಮರೇಶ ಪಾಟಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next