Advertisement

UV Fusion: ಬದಲಾಗುತ್ತಿರುವ ನಾಡಿನೊಂದಿಗೆ ಸಂಸ್ಕೃತಿಯ ಸೊಗಡು ಬದಲಾಗುತ್ತಿದೆ

03:41 PM Nov 14, 2023 | Team Udayavani |

ಮನೆಯ ಸಂಸ್ಕೃತಿಯಲ್ಲಿ ಮಕ್ಕಳ ಸಂಸ್ಕಾರ ಅಡಗಿದೆ ಎನ್ನುತ್ತಾರೆ. ಆದರೆ ಅದು ಇಂದು ಬದಲಾಗತೊಡಗಿದೆ. ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯು ಹಲವಾರು ವರ್ಷಗಳ ಹಿಂದೆ ಹುಟ್ಟಿಕೊಂಡಿದ್ದು ಮತ್ತು ಎಲ್ಲ ದೇಶಗಳು ಹಿಂದೆ ತಿರುಗಿ ನೋಡುವಂತೆ ಸಂಸ್ಕೃತಿಯು ಒಂದು ಕಾಲದಲ್ಲಿ ಬೆಳೆದು ನಿಂತಿತ್ತು. ಇದಕ್ಕೆ ನಮ್ಮ ದೇಶದ ಪೂರ್ವಜರೇ ಬುನಾದಿ ಎಂದು ಹೇಳಬಹುದು. ಹಾಗಾಗಿ ನಮ್ಮ ನಾಡಿನಲ್ಲಿ ಸಂಸ್ಕೃತಿಯ ಶಿಖರವೇ ರೂಪುಗೊಂಡಿತ್ತು. ಬಹುಶಃ ಈ ಕಾರಣದಿಂದಲೇ ಸಂಸ್ಕೃತಿಯು ಅಲ್ಲಿಂದ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿರಬೇಕು. ಆದರೆ ಇಂದಿನ ಸನ್ನಿವೇಶದಲ್ಲಿ ಅದು ನಮಗೆ ತಿಳಿಯದೆ ಕಣ್ಣೆದುರಿಗೆ ಮಾಯವಾಗುತ್ತಿದೆ.

Advertisement

ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಚಾರ- ವಿಚಾರ ಪದ್ಧತಿಗಳದ್ದವು. ಆದರೆ ಸಂಸ್ಕೃತಿಯ ಮೇಲಿದ್ದ ಗೌರವ ಒಂದೇ ಆಗಿತ್ತು. ಹಿಂದೆ ಪ್ರತಿಯೊಂದು ವಿಷಯದಲ್ಲೂ ನಮ್ಮ ಸಂಸ್ಕೃತಿಯು ಪ್ರಜ್ವಲಿಸುತ್ತಿತ್ತು. ಇಂದು ಕೇವಲ ನಾಡು ಬೆಳೆಯುತ್ತಿದೆ ಸಂಸ್ಕೃತಿಯು ಕ್ಷೀಣಿಸುತ್ತಿದೆ.

ಹಿಂದೆ ಜನರಿಗೆ ಶಿಕ್ಷಣದ ಜ್ಞಾನ ಇಲ್ಲದಿದ್ದರೂ ಸಂಸ್ಕೃತಿಯ ಸಾಮಾನ್ಯ ಜ್ಞಾನವನ್ನು ಇಂದಿಗಿಂತ ಚೆನ್ನಾಗಿ ಅರಿತಿದ್ದರು. ಹಾಗಾಗಿ ನಾಡು, ಜನರು ಬೆಳೆಯುತ್ತಿದ್ದಂತೆ ಸಂಸ್ಕೃತಿಯು ಬೆಳೆದುಕೊಂಡು ಬರುತ್ತಿತ್ತು. ಅಂದು ಸಂಸ್ಕೃತಿಗೆ ಪೂರ್ವಜರು ಹೆಚ್ಚು ಒತ್ತು ನೀಡುತ್ತಿದ್ದರು. ಇಂದು ಸಂಸ್ಕೃತಿಗೆ ಪ್ರಾಮುಖ್ಯತೆಯನ್ನು ನೀಡುವ ಬದಲು ವ್ಯವಹಾರಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಸಂಸ್ಕೃತಿಯು ಮಾಸಿ ಹೋಗುತ್ತಿದೆ.

ಭಕ್ತಿ ಪೂರ್ವಕವಾಗಿದ್ದ ಸಂಸ್ಕೃತಿ ಇಂದು ಶೋಕಿಯಾಗಿ ಬದಲಾಗುತ್ತಿದೆ. ಬದಲಾಗುತ್ತಿರುವ ನಾಡಿನೊಂದಿಗೆ ಸಂಸ್ಕೃತಿ ಎಂಬ ವಿಷಯವನ್ನೇ ಮರೆಯುತ್ತಿದ್ದೇವೆ. ಪ್ರತಿಯೊಂದು ಹಬ್ಬ, ಆಚರಣೆಗೂ ಅದರದ್ದೇ ಆದ ರೀತಿ – ರಿವಾಜು, ಆಚರಣ ಕ್ರಮಗಳಿವೆ. ಆದರೆ ಇಂದು ಅವುಗಳು ನಿಧಾನಕ್ಕೆ ಬದಲಾಗುತ್ತ ಕೇವಲ ಆಡಂಭರವಷ್ಟೇ ಹೆಚ್ಚುತ್ತಿದೆ.

ಒಂದೊಂದೇ ಆಚರಣ ಕ್ರಮಗಳನ್ನು ಮರೆಯುತ್ತಿದ್ದೇವೆ. ಪಾಶ್ಚಾತ್ಯ ಆಚರಣೆಗಳತ್ತ ಮುಖ ಮಾಡುವ ನಾವು ನಮ್ಮ ಸಂಸ್ಕೃತಿಯ ವಿಶೇಷತೆ, ಪ್ರತಿಯೊಂದು ಕ್ರಮ, ಆಚರಣೆಗಳ ಬಗ್ಗೆ ಗಮನಹರಿಸಿದರೆ ಭಾರತದ ಶ್ರೀಮಂತ ಸಂಸ್ಕೃತಿಯ ಬಗ್ಗೆ ತಿಳಿಯಬಹುದು. ಅದನ್ನು ತಿಳಿದು ನಾವು ನಮ್ಮ ಮುಂದಿನ ಪೀಳಿಗೆಗೂ ತಿಳಿಯುವಂತೆ ಮಾಡಬಹುದು. „ ವೆನಿತ್‌ ಮುಕ್ಕೂರು ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next