Advertisement

ಬಿಹಾರ ಚುನಾವಣೆ 2020: ಚಿರಾಗ್ ಪಾಸ್ವಾನ್ ಗೆ ತೇಜಸ್ವಿ ಬೆಂಬಲ, ನಿತೀಶ್ ಗೆಲುವಿಗೆ ಅಡ್ಡಗಾಲು?

04:05 PM Oct 19, 2020 | Nagendra Trasi |

ಪಾಟ್ನಾ:ಬಿಹಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರತೊಡಗಿದ್ದು ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ಚಿರಾಗ್ ಪಾಸ್ವಾನ್ ಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಮತ್ತಷ್ಟು ಚಿಂತೆಗೆ ಕಾರಣವಾಗಿರುವುದಾಗಿ ವರದಿ ತಿಳಿಸಿದೆ.

Advertisement

ಚುನಾವಣಾ ಪ್ರಚಾರದಲ್ಲಿ ತೇಜಸ್ವಿ ಯಾದವ್ ಸವಾಲನ್ನು ನಿತೀಶ್ ಕುಮಾರ್ ಎದುರಿಸುತ್ತಿರುವ ನಡುವೆಯೇ ಮೈತ್ರಿಯಿಂದ ಹೊರನಡೆದಿರುವ ಚಿರಾಗ್ ಪಾಸ್ವಾನ್ ಕೂಡಾ ಸವಾಲಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿತೀಶ್ ಕುಮಾರ್ ಅವರ ಚಿಂತೆಗೆ ಕಾರಣವಿದೆ. ತೇಜಸ್ವಿ ಯಾದವ್ ಸೋಮವಾರ (ಅಕ್ಟೋಬರ್ 19, 2020)ದಂದು ಮಾತನಾಡುತ್ತ, ಲೋಕ್ ಜನಶಕ್ತಿ ಪಕ್ಷ(ಎಲ್ ಜೆಪಿ)ದ ಮುಖಂಡ ಚಿರಾಗ್ ಪಾಸ್ವಾನ್ ಅವರು ಆಡಳಿತಾರೂಢ ಎನ್ ಡಿಎಯಿಂದ ಹೊರಬಂದು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದಾರೆ. ಅಷ್ಟೇ ಅಲ್ಲ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸುತ್ತಿದ್ದರು ಕೂಡಾ ತಾವು ಬಿಜೆಪಿ ಮೈತ್ರಿಯ ಭಾಗವಾಗಿರಬೇಕೆಂದು ಬಯಸಿರುವುದಾಗಿ ಹೇಳಿದ್ದರು.

“ನಿತೀಶ್ ಕುಮಾರ್ ಜೀ…ಚಿರಾಗ್ ಪಾಸ್ವಾನ್ ಉತ್ತಮ ಅಭ್ಯರ್ಥಿಯಲ್ಲವೇ? ಈ ಮೊದಲಿಗಿಂತಲೂ ಈಗ ಚಿರಾಗ್ ಗೆ ತಂದೆಯ ಅಗತ್ಯತೆ ಹೆಚ್ಚಿದೆ. ಆದರೆ ರಾಮ್ ವಿಲಾಸ್ ಪಾಸ್ವಾನ್ ಅವರು ಈಗ ನಮ್ಮೊಂದಿಗೆ ಇಲ್ಲ. ಈ ಬಗ್ಗೆ ಬೇಸರವಿದೆ. ಇಂತಹ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರ ವರ್ತನೆಯಿಂದ ಚಿರಾಗ್ ಗೆ ಅನ್ಯಾಯವಾಗಿದೆ ಎಂದು ತೇಜಸ್ವಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಇದನ್ನೂ ಓದಿ:ಲಡಾಖ್‌: ಸೆರೆಸಿಕ್ಕ ಚೀನ ಸೈನಿಕ ಪ್ರೋಟೋಕಾಲ್ ಅನುಸಾರ ಹಸ್ತಾಂತರ ಸಾಧ್ಯತೆ!

Advertisement

ಕೇಂದ್ರ ಮಾಜಿ ಸಚಿವ, ನನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಬಳಿಕ ನಿತೀಶ್ ಕುಮಾರ್ ಅವರ ನಿಲುವು ತಮ್ಮ ಮನಸ್ಸಿಗೆ ನೋವು ತಂದಿರುವುದಾಗಿ ಎನ್ ಡಿಟಿವಿಗೆ ಚಿರಾಗ್ ನೀಡಿದ್ದ ಸಂದರ್ಶನದಲ್ಲಿ ನೀಡಿದ್ದ ಮೂರು ದಿನದ ನಂತರ ತೇಜಸ್ವಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಇದೀಗ ಚಿರಾಗ್ ಪಾಸ್ವಾನ್ ಗೆ ತೇಜಸ್ವಿ ಯಾದವ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಹಲವು ತಂತ್ರಗಾರಿಕೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ತೇಜಸ್ವಿ ತಂದೆ ಲಾಲುಪ್ರಸಾದ್, ಚಿರಾಗ್ ತಂದೆ ಪಾಸ್ವಾನ್ ಹಳೆಯ ಮಿತ್ರರು, ಅಲ್ಲದೇ ಇಬ್ಬರು ನಿತೀಶ್ ಕುಮಾರ್ ಜತೆ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು.

2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಯಾದವ್ ಅವರನ್ನು ತೇಜಸ್ವಿ ಯಾದವ್ ಪರಾಜಯಗೊಳಿಸಿದ್ದರು.  ರಜಪೂತ್ ಸಮುದಾಯದ ಮತಗಳು ಸಾಮಾನ್ಯವಾಗಿ ಬಿಜೆಪಿಗೆ ಹೋಗಲಿದ್ದು, ಒಂದು ವೇಳೆ ಚಿರಾಗ್ ಪಾಸ್ವಾನ ಆಡಳಿತರೂಢ ಮೈತ್ರಿಕೂಟದ ಮತಗಳನ್ನು ಸೆಳೆದಲ್ಲಿ ತೇಜಸ್ವಿ ಯಾದವ್ ಲೆಕ್ಕಾಚಾರ ಸಲೀಸಲಾಗಿದೆ ಎಂದು ವರದಿ ತಿಳಿಸಿದೆ.

243 ಸದಸ್ಯ ಬಲದ ವಿಧಾನಸಭೆಯ ಮೊದಲ ಹಂತದ ಚುನಾವಣೆ ಅಕ್ಟೋಬರ್ 28ರಂದು, ನವೆಂಬರ್ 3ರಂದು ನಡೆಯಲಿದ್ದು, ನವೆಂಬರ್ 7ರಂದು ಮೂರನೇ ಹಂತದ ಚುನಾವಣೆ. ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next